More

    ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಮಂಜೂರು – ಡಾ. ಕೋರೆ ಹರ್ಷ


    ಬೆಳಗಾವಿ: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ- ಧಾರವಾಡ-ಹುಬ್ಬಳ್ಳಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರು ನೀಡಿರುವುದು ಅತ್ಯಂತ ಹರ್ಷ ತಂದಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬೆಳಗಾವಿ-ಧಾರವಾಡ- ಹುಬ್ಬಳ್ಳಿ ಮಹಾನಗರಗಳು ವಾಣಿಜ್ಯ, ಔದ್ಯಮಿಕವಾಗಿ ಶರವೇಗದಲ್ಲಿ ಬೆಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಈ ಭಾಗದ ಸಾರಿಗೆ ವಸ್ಥೆಯಲ್ಲಿಯೂ ಕ್ರಾಂತಿಕಾರಿ ಬದಲಾವಣೆಯಾದರೆ ಅಭಿವೃದ್ಧಿಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣವಾಗಲಿದೆ. ನಿತ್ಯ ಬೆಳಗಾವಿ-ಧಾರವಾಡ- ಹುಬ್ಬಳ್ಳಿಯಿಂದ ಸಂಚರಿಸುವ ಪ್ರಯಾಣಿಕರಿಗೂ ಇದು ಅನುಕೂಲವಾಗುವುದು ಎಂದು ಕೋರಿ ಹೇಳಿದರು.

    73 ಕಿ.ಮೀ. ಉದ್ದದ ಈ ರೈಲು ಮಾರ್ಗದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲಿ. ಇಲ್ಲಿಯವರೆಗೆ ಹಲವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹೋಗಿದ್ದರೂ ಯಾರೊಬ್ಬರೂ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿರಲಿಲ್ಲ, ಆದರೆ, ಪ್ರಸ್ತುತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಈ ಭಾಗದ ಜನರ ಧ್ವನಿಯಾಗಿದ್ದಾರೆ. ಪ್ರಧಾನಿ ಅವರಿಂದ ರೈಲು ಮಾರ್ಗ ಮಂಜೂರು ಮಾಡಿಸಿಕೊಂಡು ತಂದಿರುವುದು ಸಂತಸದ ವಿಚಾರವಾಗಿದೆ. ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಡಾ. ಕೋರೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts