ಬೇಕಲಕೋಟೆ, ಪಳ್ಳಿಕ್ಕರೆ ಬೀಚ್ ಆಕರ್ಷಣೆ

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇರಳದ ಅತಿ ದೊಡ್ಡ ಕೋಟೆಯಾಗಿರುವ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಬೇಕಲಕೋಟೆ ತನ್ನ ಹೊಳಪನ್ನು ಹೆಚ್ಚಿಸಿಕೊಂಡು ಆಕರ್ಷಣೆ ಪಡೆದಿದೆ. ಆಮೂಲಾಗ್ರ ಸ್ವರೂಪ ಬದಲಿಸಿಕೊಂಡು ನೂತನ ಮುಖಚ್ಛಾಯೆಯೊಂದಿಗೆ ಕೋಟೆ ಮತ್ತು ಆವರಣ ಪ್ರದೇಶ ಪ್ರವಾಸಿಗರನ್ನು ಸೆಳೆಯುತ್ತಿದೆ.

ಬೇಕಲ ಕೋಟೆಯ ಲೈಟ್ ಆ್ಯಂಡ್ ಸೌಂಡ್ ಶೋ ಈಗಾಗಲೇ ದಾಖಲೆಯ ಮನ್ನಣೆ ಪಡೆದಿದೆ. ಪ್ರಸಕ್ತ ಹೆಚ್ಚುವರಿ ಸೌಂದರ್ಯದೊಂದಿಗೆ ಕೋಟೆ ವಠಾರ ನಳನಳಿಸಿದರೆ, ಪಳ್ಳಿಕ್ಕರೆ ಬೀಚ್ ಕೂಡ ತನ್ನ ಮುಖಚರ್ಯೆ ಬದಲಿಸಿಕೊಂಡಿದೆ. ಈ ಬದಲಾವಣೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೇರಳದ ಉತ್ತರ ಮಲಬಾರ್ ಪ್ರದೇಶದ ಅತಿದೊಡ್ಡ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಬೇಕಲಕೋಟೆ 400 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ಕೇರಳದ ಏಕೈಕ ಪ್ರವಾಸಿ ತಾಣವೂ ಆಗಿದೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಸಮೀಪದ ಪಳ್ಳಿಕ್ಕರೆ ಬೀಚ್ ಕೂಡ ಇಲ್ಲಿನ ಪ್ರಧಾನ ಕೇಂದ್ರವಾಗಿದೆ. ಕರ್ನಾಟಕದ ಇತಿಹಾಸದ ಸಂಕೇತದ ಜತೆಗೆ ಕೇರಳದ ಸೌಂದರ್ಯವನ್ನೂ ಉಳಿಸಿಕೊಂಡು ಕಾಸರಗೋಡು ಜಿಲ್ಲೆಯಲ್ಲಿ ತಲೆಎತ್ತಿ ನಿಂತಿರುವ ಬೇಕಲಕೋಟೆಗೆ ತನ್ನದೇ ಆದ ಮಹತ್ವವಿದೆ.

ಬೇಕಲ ಕೋಟೆಗೆ ಸ್ವಾಗತ ಕಮಾನು ಹೊಂದಿದ ಪ್ರವೇಶ ದ್ವಾರ, ಹಾದಿ ಬದಿಯ ಸೌಂದರ್ಯೀಕರಣ ಜತೆಗೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. 2019ರ ಜೂನ್ ತಿಂಗಳಲ್ಲಿ ಈ ನಿಟ್ಟಿನಲ್ಲಿ 99,94,176 ರೂ. ಯೋಜನೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಂಜೂರಾತಿ ನೀಡಿದ್ದು, ಸ್ವಾಗತ ಕಮಾನು, ಆವರಣಗೋಡೆ, ಇಂಟರ್‌ಲಾಕ್ ಹೊದೆಸಿದ ಕಾಲ್ನಡಿಗೆ ಹಾದಿ, ಟ್ರಾಫಿಕ್ ಸರ್ಕಲ್ ಇತ್ಯಾದಿ ಕಾಮಗಾರಿಗಳು ಯಥಾಸಮಯದಲ್ಲಿ ಪೂರ್ಣಗೊಂಡಿವೆ. ಬೇಕಲ ಕೋಟೆಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ತಲುಪಲು ಸುಗಮವಾಗುವ ರೀತಿಯಲ್ಲಿ ಸೂಚನಾ ಫಲಕ, ಕಮಾನು ನಿರ್ಮಿಸಲಾಗಿದೆ. ಕಣ್ಣೂರು ಹಾಗೂ ಮಂಗಳೂರಿನಿಂದ ಬರುವವರಿಗೆ ಈಗ ರಾತ್ರಿ ಕಾಲದಲ್ಲೂ ಗಮನ ಸೆಳೆಯುವ ರೀತಿಯ ಹಾದಿದೀಪಗಳು ಇತ್ಯಾದಿ ಅಳವಡಿಸಲಾಗಿದೆ.

ಬೇಕಲ ಕೋಟೆ ಸೌಂದರ್ಯ ಯೋಜನೆಯನ್ವಯ ಈಗಾಗಲೇಒಂದು ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ. ಬೇಕಲಕೋಟೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. 5 ಕೋಟಿ ರೂ. ವೆಚ್ಚದ ನವೀಕರಣ ಕಾಮಗಾರಿ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗುವುದು.
ಬಿಜು ರಾಘವನ್, ಕಾರ್ಯದರ್ಶಿ,
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…