More

    ಸಂರಕ್ಷಣಾ ಕೇಂದ್ರದಲ್ಲಿದ್ದ ಹೆಣ್ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿದ ತಂದೆ

    ಉಡುಪಿ: ಮಕ್ಕಳ ರಕ್ಷಣಾ ಇಲಾಖೆ ವಶದಲ್ಲಿದ್ದ ಮಕ್ಕಳನ್ನು ತಾಯಿ ಪುಣ್ಯತಿಥಿ ನೆಪದಲ್ಲಿ ತಂದೆ ಹೊರಗೆ ಕರೆತಂದು, ಭಿಕ್ಷಾಟನೆಗೆ ಇಳಿಸಿದ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

    8 ಮತ್ತು 14 ವರ್ಷದ ಇಬ್ಬರು ಹೆಣ್ಮಕ್ಕಳು ಐಎಚ್‌ಐವಿ ಪೀಡಿತರು. ತಾಯಿಯ ಅಂತ್ಯಕಾಲದ ಕೋರಿಕೆಯಂತೆ ಇವರನ್ನು ಮಕ್ಕಳ ರಕ್ಷಣಾ ಘಟಕ ವಶಕ್ಕೆ ಪಡೆದು ಮಂಗಳೂರಿನ ಪಾಲನಾ ಕೇಂದ್ರಕ್ಕೆ ಸೇರಿಸಲಾಗಿತ್ತು. 20 ದಿನಗಳ ಹಿಂದೆ ಮಂಗಳೂರಿಗೆ ತೆರಳಿದ ತಂದೆ, ತಾಯಿಯ ಪುಣ್ಯತಿಥಿ ಇರುವುದರಿಂದ 3 ದಿನಗಳ ಮಟ್ಟಿಗೆ ಮಕ್ಕಳನ್ನು ವಶಕ್ಕೆ ನೀಡುವಂತೆ ಲಿಖಿತ ಮನವಿ ಸಲ್ಲಿಸಿ ಉಡುಪಿಗೆ ಕರೆತಂದಿದ್ದ. ನಂತರ ಸಂಸ್ಥೆಗೆ ಸೇರಿಸದೆ ನಗರದಲ್ಲಿ ಭಿಕ್ಷಾಟನೆಗೆ ಇಳಿಸಿದ್ದ. ಸಾಮಾಜಿಕ ಕಾರ್ಯಕರ್ತರೊಬ್ಬರು ಮಕ್ಕಳನ್ನು ಗಮನಿಸಿ ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದರು. ಅನಂತರ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮತ್ತೆ ಮಂಗಳೂರಿನ ಪಾಲನಾ ಕೇಂದ್ರಕ್ಕೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಮತಿ ಇಲ್ಲದೆ ಯಾರ ವಶಕ್ಕೂ ನೀಡದಂತೆ ಮಕ್ಕಳ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

    ತಂದೆಗೆ ಕ್ಷಯರೋಗ ಸಹಿತ ಮಾರಕ ಕಾಯಿಲೆ ಹಾಗೂ ಎಲ್ಲ ದುಶ್ಚಟಗಳು ಇರುವುದರಿಂದ ಮಕ್ಕಳು ತಂದೆಯೊಂದಿಗೆ ಬದುಕುವುದು ಸೂಕ್ತವಲ್ಲ ಎಂದು ಇಲಾಖಾ ಸುಪರ್ದಿಗೆ ಒಪ್ಪಿಸಲಾಗಿತ್ತು. ಬಾಲಕಿಯರಲ್ಲಿ ಓರ್ವಳು ಪ್ರೌಢಾವಸ್ಥೆಗೆ ಬಂದಿದ್ದು ತಿಂಗಳಿನಿಂದ ರಾತ್ರಿ ಹಗಲು ಬೀದಿ ಬೀದಿ ಅಲೆದಾಡುವುದು ಸರಿಯಲ್ಲ. ಇಂಥ ಪ್ರಕರಣಗಳ ಬಗ್ಗೆ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts