More

    ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ನೀಡಿದ ಲಾಕ್​ಡೌನ್​….!

    ನವದೆಹಲಿ: ಲಾಕ್​ಡೌನ್​ ಕಾಲದಲ್ಲಿ ಎಲ್ಲವೂ ಸ್ಥಬ್ದವಾಗಿತ್ತು. ಆದರೆ, ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ಬಂದೆರಗಿತ್ತು ಎಂದರೆ ನಂಬಲೇಬೇಕು….!

    ಸಾಮಾನ್ಯವಾಗಿ ಮಾರ್ಚ್​ನಿಂದ ಮೇ ವರೆಗಿನ ಅವಧಿಯನ್ನು ಜೇನು ಸಾಕಣೆದಾರರು ಶುಷ್ಕ ಅವಧಿ ಅಥವಾ ಅಷ್ಟೊಂದು ಜೇನು ಪಡೆಯಲಾಗದ ಕಾಲಮಾನ ಎಂದೇ ಪರಿಗಣಿಸುತ್ತಾರೆ. ಆದರೆ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಅಂದರೆ ಶೇ.30ರಿಂದ 40ರವರೆಗೆ ಹೆಚ್ಚು ಜೇನು ಸಂಗ್ರಹಿಸಿದ್ದಾಗಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಲಾಕ್​ಡೌನ್​.

    ಕಳೆದ ಮೂರು ತಿಂಗಳಿನಿಂದ ಉಂಟಾಗಿದ್ದ ಮಾಲಿನ್ಯರಹಿತ ವಾತಾವರಣ ಹಾಗೂ ಕ್ರಿಮಿನಾಶಕಗಳ ಸಿಂಪಡನೆ ಇಲ್ಲದಿರುವುದು ಹಾಗೂ ಪ್ರಶಾಂತ ಪರಿಸರ ಜೇನು ನೊಣಗಳ ಚಟುವಟಿಕೆಯನ್ನು ಇಮ್ಮಡಿಸಿದೆ. ಇದರಿಂದಾಗಿ ಜೇನು ಸಂಗ್ರಹ ಹೆಚ್ಚಾಗಿದೆ ಎನ್ನುವುದು ತಜ್ಞರ ಅಭಿಮತ.

    ಇದನ್ನೂ ಓದಿ; ಎಚ್ಚರ…. ಭಾರತದ ವಿರುದ್ಧ ಸೈಬರ್​ ದಾಳಿಗಿಳಿದ ಚೀನಾ…! ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ

    ಹಿಮಾಚಲ ಪ್ರದೇಶ, ಉತ್ತರಪ್ರದೇಶ ಹಾಗೂ ಕಾಶ್ಮೀರದಲ್ಲಿ ಜೇನು ಸಾಕಣೆಗೆ ತೋಟಗಳನ್ನು ಮಾಡಿಕೊಂಡಿರುವ ವಿಜಯ್​ ಕಸನಾ ಕೂಡ ಇದನ್ನೇ ಹೇಳುತ್ತಾರೆ. ಈ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಜೇನು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

    ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ವಿನಯ್​ಕುಮಾರ್​ ಕೂಡ ಇದನ್ನು ಅನುಮೋದಿಸುತ್ತಾರೆ. ಉಳಿದ ಅವಧಿಯಲ್ಲಿ ಪ್ರತಿ ಜೇನು ಪೆಟ್ಟಿಗೆಯಿಂದ 15ರಿಂದ 20 ಕೆಜಿ ಸಂಗ್ರಹವಾದರೆ, ಲಾಕ್​ಡೌನ್​ ಅವಧಿಯಲ್ಲಿ ಈ ಪ್ರಮಾಣ 30ರಿಂದ 40 ಕೆಜಿಗೆ ಏರಿತ್ತು ಎನ್ನುತ್ತಾರೆ.
    ಜೇನು ಸಾಕಣೆ ಪ್ರಮುಖವಾಗಿರುವ ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್​, ಉತ್ತರಾಖಂಡ್​ ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಈ ವಿದ್ಯಮಾನ ಗಮನಿಸಲಾಗಿದೆ.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ಭಾರತದಲ್ಲಿ 207-18ನೇ ಸಾಲಿನಲ್ಲಿ 1.05 ಲಕ್ಷ ಮೆಟ್ರಿಕ್​ ಟನ್​ ಜೇನು ಉತ್ಪಾದಿಸಲಾಗಿದ್ದು, ಈ ಬಾರಿ ಇದು ಹೆಚ್ಚಳವಾಗುವ ಸಂಭವವಿದೆ.

    ಒಂದಿಡೀ ದಿನವಾದರೂ ಬೇಯಲಿಲ್ಲ ಕರೊನಾಪೀಡಿತನ ಶವ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts