More

    ಸರ್ವಜ್ಞ ವಚನಗಳು ಸರಳ

    ಬೀಳಗಿ: ಸರ್ವಜ್ಞ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಅವರ ವಚನಗಳು ತುಂಬಾ ಸರಳವಾಗಿದ್ದು, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಹೇಳಿದರು.

    ತಾಲೂಕಿನ ಟಕ್ಕಳಕಿ ಪು.ಕೇಂದ್ರದ ಬಸವೇಶ್ವರ ದೇವಸ್ಥಾನದಲ್ಲಿ ರಾಜ್ಯ ಕುಂಬಾರ ಯುವಸೈನ್ಯ ಬೀಳಗಿ ಘಟಕ, ವೀರಭದ್ರೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞರ 500ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

    ತನ್ನದೆ ಸಂಸ್ಕೃತಿ ಹಾಗೂ ವಿಶಿಷ್ಟತೆಯ ಕಾಯಕ ನಿಷ್ಠೆಯೊಂದಿಗೆ ಮುನ್ನಡೆಯುತ್ತಿರುವ ಸಮಾಜವೆಂದರೆ ಅದು ಕುಂಬಾರ ಸಮಾಜವಾಗಿದೆ. ತೆರೆಮರೆ ಕಾಯಿಯಂತೆ ತಮ್ಮ ವೃತ್ತಿಯೊಂದಿಗೆ ಕೃಷಿಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಸಮುದಾಯ ಶ್ರಮಿಸುತ್ತಿದೆ. ಸಮಾಜ ಬಾಂಧವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

    ಅಥಣಿ ತಾಲೂಕು ತೆಲಸಂಗದ ಶರಣ ಕುಂಬಾರ ಗುಂಡಯ್ಯ ಗುರುಪೀಠದ ಕುಂಬಾರ ಗುಂಡಯ್ಯ ಶರಣರು, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ವಾಣಿಜ್ಯ ಕಾಲೇಜು ಉಪನ್ಯಾಸಕ ಬಸವರಾಜ ಪಾಂಡಪ್ಪ ಕುಂಬಾರ ಉಪನ್ಯಾಸ ನೀಡಿದರು.

    ಬೀಳಗಿ ಕುಂಬಾರ ಸಂಘದ ಅಧ್ಯಕ್ಷ ಡಾ.ಸಂತೋಷಕುಮಾರ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಕುಂಬಾರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಕುಂಬಾರ, ಜಿಲ್ಲಾಧ್ಯಕ್ಷ ಡಾ.ಎಂ.ಎನ್. ಸಂಗಮ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಜಗದೇವ ಕುಂಬಾರ, ಈರಪ್ಪ ಕುಂಬಾರ, ಶಿವಲಿಂಗಪ್ಪ ಕುಂಬಾರ (ತೋಳಮಟ್ಟಿ), ಸಿದ್ದಪ್ಪ ಬಿದರಿ, ಗಿರಿಮಲ್ಲಪ್ಪ ಕುಂಬಾರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts