More

    ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿನೆ ಮಾಡಿ

    ಬೀಳಗಿ: ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಬೀಳಗಿ ತಾಲೂಕು ಶ್ರೀಕೃಷ್ಣ ಯಾದವ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಸೀಲ್ದಾರ್ ಭೀಮಪ್ಪ ಅಜೂರ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

    ಸಂಘದ ಕಾರ್ಯದರ್ಶಿ ಹಣಮಂತ ಎಸ್.ತೆಗ್ಗಿ ಮಾತನಾಡಿ, ರಾಜ್ಯದಲ್ಲಿ ಗೊಲ್ಲ ಸಮುದಾಯ ಗಣನೀಯವಾಗಿದ್ದು, ಸಮಾಜ ಬಾಂಧವರು ಆರ್ಥಿಕ, ಸಾಮಾಜಿಕ, ಶಿಕ್ಷಣ, ರಾಜಕೀಯ ರಂಗದಲ್ಲಿ ಅತಿ ವಿರಳ ಇದ್ದಾರೆ. ಈ ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು ಸಂತಸ ತಂದಿದೆ ಎಂದರು.

    ಕಾಡುಗೊಲ್ಲ ಅಭಿವೃದ್ಧಿ ನಿಮಗ ಸ್ಥಾಪನೆ ಮಾಡುವುದರಿಂದ ಉಳಿದ ಯಾದವ ಗೊಲ್ಲ ಜನರಿಗೆ ಅನ್ಯಾಯವಾಗಲಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಆದೇಶಿಸಿರುವುದು ಇಡೀ ಯಾದವ ಗೊಲ್ಲ ಸಮಾಜಕ್ಕೆ ವಿಷಾದಕರ ಸಂಗತಿಯಾಗಿದೆ. ಸರ್ಕಾರ ಒಂದೇ ದಿನದಲ್ಲಿ ಎರಡು ಟಿಪ್ಪಣಿಗಳನ್ನು ಕಳುಹಿಸಿ ದ್ವಂದ್ವ ನೀತಿಯನ್ನು ಅನುಸರಿಸಿದ್ದು ಖೇದಕರ. ಕೂಡಲೇ ಮುಖ್ಯಮಂತ್ರಿಗಳು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

    ಗೌರವ ಅಧ್ಯಕ್ಷ ಯಲ್ಲಪ್ಪ ಹಣಮರ, ಉಪಾಧ್ಯಕ್ಷೆ ಸುಜಾತಾ ಘಾಟೆ, ಟಿಎಪಿಸಿಎಂಎಸ್ ಸದಸ್ಯ ರಂಗಪ್ಪ ವೈ.ತೆಗ್ಗಿ, ಸತ್ಯಪ್ಪ ತಳವಾರ, ಬಸವರಾಜ ತಳವಾರ, ಮುತ್ತಪ್ಪ ಪಿ.ತೆಗ್ಗಿ, ರಮೇಶ ಹಣಮರ, ರಾಮಪ್ಪ ಕೋಳೊನ್ನವರ, ಚಂದ್ರಶೇಖರ ಬಬಲಾದಿ, ಶಿವಪ್ಪ ಹಣಮರ, ಹಣಮಂತ ಕಾಡನ್ನವರ, ಹಣಮಂತ ಜಿ.ಹಣಮರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts