More

    ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ!

    ಮಂಗಳೂರು: ಹಾಸನದಿಂದ ಮಂಗಳೂರಿಗೆ ಹಾಲಿನ ವ್ಯಾನ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವುದನ್ನು ಬಜರಂಗದಳ ಕಾರ್ಯಕರ್ತರು ಮಂಗಳವಾರ ಪತ್ತೆ ಮಾಡಿದ್ದಾರೆ. ವಾಹನವನ್ನು ಮಿಲಾಗ್ರಿಸ್ ಚರ್ಚ್ ಬಳಿ ಕಾರ್ಯಕರ್ತರು ತಡೆದಿದ್ದು, ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಸುಮಾರು 1 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಯಲಾಗಿದೆ.

    ಗೋಮಾಂಸ ಸಾಗಾಟ ಬಗ್ಗೆ ಮಾಹಿತಿ ಪಡೆದ ಸಂಘಟನೆ ಕಾರ್ಯಕರ್ತರು ಪಂಪ್‌ವೆಲ್ ಸರ್ಕಲ್ ಬಳಿ ವಾಹನ ಅಡ್ಡ ಹಾಕಲು ಯತ್ನಿಸಿದ್ದಾರೆ. ಆದರೆ ಚಾಲಕ ವಾಹನ ನಿಲ್ಲಿಸದೆ ಚಲಾಯಿಸಿಕೊಂಡು ಸ್ಟೇಟ್‌ಬ್ಯಾಂಕ್ ಸರ್ಕಲ್‌ನತ್ತ ತೆರಳಲು ಮುಂದಾಗಿದ್ದಾನೆ. ಕಾರ್ಯಕರ್ತರು ಬೆನ್ನಟ್ಟಿ ಬಂದು ಮಿಲಾಗ್ರಿಸ್ ಬಳಿ ವಾಹನ ತಡೆದು ನಿಲ್ಲಿಸಿದರು. ಈ ವೇಳೆ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ವಾಹನ ಚಾಲಕ, ಮಂಗಳೂರು ಕೋಡಿಕಲ್‌ನ ಶಮೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿಸಿಕೊಂಡವರಿಗೆ ಶೋಧ ನಡೆದಿದೆ.

    ಕ್ರೇಟ್‌ನಲ್ಲಿದ್ದುದು ಹಾಲಲ್ಲ, ಬೀಫ್!: ಕೆಲದಿನಗಳಿಂದ ಅಕ್ರಮ ಗೋಸಾಗಾಟ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ರಾತ್ರಿ ಹೊತ್ತು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿರುತ್ತಾರೆ. ಹೀಗಾಗಿ ಗೋವುಗಳನ್ನು ಸಾಗಿಸಿದರೆ ಸಿಕ್ಕಿಬೀಳುವುದರಿಂದ ಹಾಲಿನ ವಾಹನದಲ್ಲಿ ಸುಲಭವಾಗಿ ಗೋಮಾಂಸ ಕೊಂಡೊಯ್ಯಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆರೋಪಿಗಳು ಹಾಸನದಿಂದ ಹಾಲಿನ ಕ್ರೇಟ್‌ನಲ್ಲಿ ಗೋಮಾಂಸ ತುಂಬಿಸಿದ್ದರು. ಗೋಮಾಂಸವನ್ನು ಮಂಗಳೂರಿನಲ್ಲಿ ಬೇಡಿಕೆ ಇರುವ ಹೋಟೆಲ್, ಅಂಗಡಿಗಳಿಗೆ ವಿತರಿಸುವುದಕ್ಕೆ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts