More

    ಕೃಷಿ ಕಾರ್ಮಿಕರಿಗೂ ಜೇನು ಕೃಷಿ ಲಾಭದಾಯಿಕ

    ಎನ್.ಆರ್.ಪುರ: ಜೇನು ಸಾಕಾಣಿಕೆ ಕೇವಲ ಕೃಷಿಕರಿಗೆ ಮಾತ್ರವಲ್ಲ ಕೃಷಿ ಕಾರ್ಮಿಕರಿಗೂ ಲಾಭದಾಯಿಕ ಕೃಷಿಯಾಗಿದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ ರೋಹಿತ್ ತಿಳಿಸಿದರು.
    ಮಂಗಳವಾರ ಪಟ್ಟಣದ ಮೇದರ ಬೀದಿಯ ಅಂತರಘಟ್ಟಮ್ಮ ಸಮುದಾಯ ಭವನದಲ್ಲಿ ಶಿವಮೊಗ್ಗದ ಪ್ರಾದೇಶಿಕ ರಬ್ಬರ್ ಅಭಿವೃದ್ಧಿ ಮಂಡಳಿ ಹಾಗೂ ಶೆಟ್ಟಿಕೊಪ್ಪ ಚೈತನ್ಯ ರಬ್ಬರ್ ಉತ್ಪಾದಕರ ಸಂಘದ ಆಶ್ರಯದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ಸಾಕಾಣಿಕೆ ಬಗ್ಗೆ ನಡೆದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಅರಣ್ಯ ಉತ್ಪನ್ನಗಳಲ್ಲಿ ಜೇನು ತುಪ್ಪ ಸಂಗ್ರಹ ಕೂಡಾ ಲಾಭದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಜೇನು ತುಪ್ಪ ಉತ್ಪನ್ನ ಕಡಿಮೆಯಾಗುತ್ತಿದೆ. ಜೇನಿನಲ್ಲಿ ಕುಟುಂಬ ವ್ಯವಸ್ಥೆ ಇದೆ. ಎಲ್ಲವೂ ರಾಣಿ ಜೇನಿನ ಹಿಡಿತದಲ್ಲಿರುತ್ತದೆ. ಪ್ರತಿ ಜೇನು ಹುಳುವು 2 ಕಿ.ಮೀ. ಸಂಚರಿಸಿ ಆಹಾರ ಸಂಗ್ರಹ ಮಾಡುತ್ತದೆ ಎಂದರು.
    ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಇದು ರಬ್ಬರ್ ಮಂಡಳಿಯ 2ನೇ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರೂ ಕೂಡಾ ಜೇನು ಸಾಕಾಣಿಕೆ ಮಾಡಬಹುದು. ಜೇನು ತುಪ್ಪಕ್ಕೆ ಔಷಧಿಯ ಗುಣ ಇರುವುದರಿಂದ ಭಾರಿ ಬೇಡಿಕೆ ಇದೆ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಉತ್ತಮ ಆಹಾರವಾಗಿದೆ. ಯಾವುದೇ ಕಲಬೆರಕೆ ಇಲ್ಲದೆ ನೈಸರ್ಗಿಕ ಸಂಪನ್ಮೂಲಗಳಿಂದ ಸಿಗುವ ಏಕೈಕ ದಿವ್ಯ ಔಷಧ ಎಂದರೆ ಅದು ಜೇನು ತುಪ್ಪ ಎಂದರು.
    ಚೈತನ್ಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಪ್ರೇಂಜಿ ಮಾತನಾಡಿ, ಜೇನು ಸಾಕಾಣಿಕೆ ಮಾಡಿದರೆ ಪ್ರತಿ ಪೆಟ್ಟಿಗೆಯಿಂದ 5 ರಿಂದ 6 ಕೆಜಿ ಜೇನು ತುಪ್ಪ ಸಂಗ್ರಹಿಸಬಹುದು. ಇಂದು ಜೇನು ತುಪ್ಪವು ಕೆಜಿ 1ಕ್ಕೆ 600 ರಿಂದ 800 ರೂ. ಇದೆ. ಮಾರುಕಟ್ಟೆಗಳಲ್ಲಿ ಸಿಗುವ ಕಲಬೆರೆಕೆ ಜೇನು ತುಪ್ಪ ಕೊಂಡು ಕೊಳ್ಳುವ ಬದಲು ಪ್ರತಿ ಯೊಬ್ಬರೂ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಸಿಗುವ ಜೇನು ಪೆಟ್ಟಿಗೆ ಪಡೆದು ಜೇನು ಸಾಕಾಣಿಕೆ ಮಾಡಬಹುದು ಎಂದರು.
    ಅಂತರಘಟ್ಟಮ್ಮ ಸಮುದಾಯ ಭವನದ ಅಧ್ಯಕ್ಷ ಆರ್.ಪ್ರವೀಣ್, ಚೈತನ್ಯ ರಬ್ಬರ್ ಉತ್ಪಾದಕರ ಸಂಘದ ಕಾರ್ಯದರ್ಶಿ ಎಲ್ದೋ, ರಬ್ಬರ್ ಮಂಡಳಿ ಪೀಲ್ಡ್ ಆಫೀಸರ್ ಟೋನಿ, ತರಬೇತಿದಾರ ಆಲ್ದೂರು ರಂಜಿತ್, ಶೆಟ್ಟಿಕೊಪ್ಪ ಮಹೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts