More

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಬೆಂಗಳೂರು: ಸದ್ಯ ಚಿತ್ರರಂಗದಲ್ಲಿ ಎಲ್ಲೆಲ್ಲೂ ‘ಕಾಂತಾರ’ದ್ದೇ ಸುದ್ದಿ. ಒಂದು ಸಣ್ಣ ಪ್ರದೇಶದ ಬದುಕು-ಬವಣೆ ಆಧಾರಿತ ಕಥೆ ಈಗ ಜಗತ್ತಿನ ಮೂಲೆಮೂಲೆಗೂ ತಲುಪಿದ್ದು, ಭರ್ಜರಿ ಸ್ಪಂದನೆ ಸಿಗುವ ಜತೆಗೆ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಈ ಮೂಲಕ ಭಾಷೆ-ಪ್ರದೇಶದ ಹೊರತಾಗಿಯೂ ಉತ್ತಮ ಕಥೆ-ಮೇಕಿಂಗ್ ಇದ್ದರೆ ಸಿನಿಮಾದ ಗೆಲುವು ಖಚಿತ ಎಂಬ ಭರವಸೆಯನ್ನೂ ‘ಕಾಂತಾರ’ ಮೂಡಿಸಿದೆ.

    ಈ ನಡುವೆ ‘ಕಾಂತಾರ’ದ ಯಶಸ್ಸು ರಿಷಬ್ ಶೆಟ್ಟಿಯ ನಟನೆ-ನಿರ್ದೇಶನ ಎರಡರ ಕುರಿತೂ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಮಾತ್ರವಲ್ಲ, ಈ ಚಿತ್ರ ರಿಷಬ್ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಜತೆಗೆ ಇನ್ನೊಂದು ಮಜಲಿಗೆ ಕೊಂಡೊಯ್ದಿದ್ದು ಕೂಡ ಸಾಬೀತಾಗಿದೆ. ಆ ಕುರಿತಾದ ಒಂದು ಸ್ಟೇಟಸ್​ ಈಗ ವೈರಲ್​ ಆಗುತ್ತಿರುವುದಲ್ಲದೆ, ಕಾಂತಾರದಿಂದ ರಿಷಬ್​ ಸ್ಟೇಟಸ್​ ಬದಲಾಗಿದ್ದಕ್ಕೂ ಸಾಕ್ಷಿಯಾಗಿದೆ.

    ರಿಷಬ್ ಶೆಟ್ಟಿ ಚೊಚ್ಚಲ ನಿರ್ದೇಶನದ ಸಿನಿಮಾ ರಿಕ್ಕಿ 2016ರಲ್ಲಿ ತೆರೆ ಕಂಡಿತ್ತು. ಆದರೆ ಆ ಸಂದರ್ಭದಲ್ಲಿ ರಿಷಬ್​ ಚಿತ್ರರಂಗಕ್ಕೆ ಅಷ್ಟೇನೂ ಚಿರಪರಿಚಿತವಲ್ಲದ್ದರಿಂದ ಮತ್ತು ನಿರ್ದೇಶಕನಾಗಿ ಹೊಸಬನಾದ್ದರಿಂದ ರಿಕ್ಕಿಗೆ ಸರಿಯಾಗಿ ಚಿತ್ರಮಂದಿರಗಳೇ ಸಿಕ್ಕಿರಲಿಲ್ಲ. ಕರಾವಳಿ ಮೂಲದ ಒಬ್ಬ ನಿರ್ದೇಶಕ ತನ್ನ ನಿರ್ದೇಶನದ ಸಿನಿಮಾಗಾಗಿ ಮಂಗಳೂರಿನಲ್ಲೇ ಶೋ ಕೊಡಿ ಎಂದು ಕೈಕಾಲು ಹಿಡಿಯವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಸ್ವತಃ ರಿಷಬ್ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದರು.

    “ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನೆಮಾಸ್​​ನಲ್ಲಿ ನಾಳೆಯಿಂದ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಬುಕ್​ ಮಾಡಿ, ಥ್ಯಾಂಕ್ಯೂ..” ಎಂದು 2016ರ ಫೆ. 6ರಂದು ರಿಷಬ್​ ಹಾಕಿದ್ದ ಫೇಸ್​ಬುಕ್ ಸ್ಟೇಟಸ್​ ಈಗ ಮುನ್ನೆಲೆಗೆ ಬಂದು ವೈರಲ್ ಆಗಲಾರಂಭಿಸಿದೆ.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ 'ಸ್ಟೇಟಸ್​'

    ಅದಾದ ಮೇಲೆ ರಿಷಬ್​ ಕಿರಿಕ್​ ಪಾರ್ಟಿ ಚಿತ್ರವನ್ನು ನಿರ್ದೇಶಿಸಿದ್ದರು. ಅದು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಬಳಿಕ ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ’ ಕೂಡ ಭರ್ಜರಿ ಯಶಸ್ಸು ಪಡೆಯಿತು. ಈಗ ‘ಕಾಂತಾರ’ ರಿಷಬ್​ ನಿರ್ದೇಶನದಲ್ಲಿ ತೆರೆಕಂಡಿರುವ ನಾಲ್ಕನೇ ಸಿನಿಮಾ. ಈ ಚಿತ್ರಕ್ಕೆ ಅವರ ನಿರ್ದೇಶನದ ಈ ಹಿಂದಿನ ಎರಡೂ ಚಿತ್ರಗಳಿಗೆ ಸಿಕ್ಕಿದ್ದಕ್ಕಿಂತಲೂ ಭರ್ಜರಿ ಸ್ಪಂದನೆ ಸಿಕ್ಕಿದೆ. ಸಿನಿಮಾ ಬಿಡುಗಡೆ ಆಗಿ ಮೂರು ದಿನ ಕಳೆದರೂ ಶೋ ಕಡಿಮೆ ಆಗುವ ಬದಲು ಹೆಚ್ಚಾಗಿವೆ. ಎಷ್ಟರಮಟ್ಟಿಗೆ ಎಂದರೆ ಬಹುತೇಕ ಸಿನಿಮಾ ಇನ್ನೂ ಹೌಸ್​ಫುಲ್​ ಆಗಿಯೇ ಪ್ರದರ್ಶನ ಕಾಣುತ್ತಿದ್ದು, ಹಲವೆಡೆ ಟಿಕೆಟ್ ಸಿಗುತ್ತಿಲ್ಲ. ಅದರಲ್ಲೂ ಅಂದು ಕೈಕಾಲು ಹಿಡಿದು ಶೋ ಕೊಡಿ ಎಂದು ಕೇಳಬೇಕಾಗಿದ್ದ ಅದೇ ಮಂಗಳೂರಿನಲ್ಲಿ ಈಗ ಎಲ್ಲ ಶೋಗಳೂ ಬುಕ್ ಆಗಿವೆ, ಟಿಕೆಟ್ ಸಿಗದಂತಾಗಿದೆ.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ 'ಸ್ಟೇಟಸ್​'

    ಹೀಗೆ ‘ರಿಕ್ಕಿ’ ರಿಷಬ್​ರನ್ನು ಲಕ್ಕಿ ಆಗಿಸಿದ ‘ಕಾಂತಾರ’ದ ಬಗ್ಗೆ, ನಿರ್ದೇಶನದ ಮೊದಲ ಸಿನಿಮಾದಿಂದ ನಾಲ್ಕನೇ ಸಿನಿಮಾದಲ್ಲಿ ಬದಲಾದ ಸ್ಟೇಟಸ್​ ಬಗ್ಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತ ಮಾತನಾಡಿಕೊಳ್ಳಲಾರಂಭಿಸಿದ್ದು, ಕಾಲಾಯ ತಸ್ಮೈ ನಮಃ ಎಂದೂ ಹೇಳಲಾರಂಭಿಸಿದ್ದಾರೆ.

    ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts