More

    ಶಿಕ್ಷಣದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ

    ಶೃಂಗೇರಿ: ಆರೋಗ್ಯ ಕುರಿತು ಗ್ರಾಮೀಣ ಭಾಗದ ಜನತೆಗೆ ಅರಿವು ಮೂಡಿಸುವಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದು ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸ್ವಾಮಿ ಹೇಳಿದರು.
    ಶನಿವಾರ ಆರೋಗ್ಯ ಇಲಾಖೆ ಹಾಗೂ ಜೆಸಿಬಿಎಂ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರೋಗ್ಯ ಇಲಾಖೆ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಯೋಜನೆಗಳ ಮಹತ್ವ ಕುರಿತು ತರಬೇತಿ ಪಡೆದು ಸಾರ್ವಜನಿಕರಿಗೆ ತಲುಪಿಸಲು ಶ್ರಮಿಸಬೇಕು. ಎನ್‌ಎಸ್‌ಎಸ್ ಎಂದರೆ ಸೇವೆ ಎಂದರ್ಥ. ನಾವು ಮಾಡುವ ಸೇವಾ ಕಾರ್ಯ ಜನಸಮೂಹವನ್ನು ತಲುಪಿದರೆ ಮಾತ್ರ ಸೇವೆ ಎಂಬ ಪದಕ್ಕೆ ಪೂರ್ಣಅರ್ಥ ಬರುತ್ತದೆ ಎಂದರು.
    ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ಅಶ್ವಿನಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ವಿಭಿನ್ನ ಕಾರ್ಯಕ್ರಮ ರೂಪಿಸುತ್ತಿದ್ದು ಅದರ ಅರಿವು ಯುವಪೀಳಿಗೆ ತಲುಪಬೇಕು ಎಂಬ ಉದ್ದೇಶ ನಮ್ಮದಾಗಿದೆ.ಯುವ ಸಂಪತ್ತು ದೇಶದ ಅಮೂಲ್ಯವಾದ ಆಸ್ತಿ. ಆರೋಗ್ಯ ಇಲಾಖೆ ಜನಪ್ರತಿನಿಗಳು, ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳ ಜತೆ ಸಮನ್ವಯತೆ ಸಾಧಿಸಿ ಆರೋಗ್ಯ ಮಾಹಿತಿ ಪ್ರಚಾರ ಪಡಿಸುತ್ತಿದೆ ಎಂದರು.
    ಕ್ಷಯ, ತಾಯಿ ಮತ್ತು ಮಕ್ಕಳ ಆರೋಗ್ಯ ಕುರಿತು ಇರುವ ಯೋಜನೆಗಳು, ಅಯುಷ್ಮಾನ್ ಭಾರತ್.ಆರೋಗ್ಯ ಕರ್ನಾಟಕ ಮತ್ತು ಅಭಾ ಕಾರ್ಯಕ್ರಮ, ದಂತಭಾಗ್ಯ ಯೋಜನೆ ಕುರಿತು ಮಾಹಿತಿಯನ್ನು ನೀಡಲಾಯಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ, ಹಿರಿಯ ಆರೋಗ್ಯ ನಿರೀಕ್ಷಕ ಋಷ್ಯ ಶೃಂಗೇಶ್ವರ,ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಕಲಾವತಿ, ಉಪ ಪ್ರಾಚಾರ್ಯ ಪ್ರಶಾಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts