More

    ಗ್ರಾಹಕ ಹಕ್ಕುಗಳ ಅರಿವಿರಲಿ


    ನಾಗರಿಕರು ಸರಕು, ಸೇವೆಗಳನ್ನು ಪಡೆಯುವಾಗ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಸಲಹೆ ನೀಡಿದರು.


    ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ, ಗ್ರಾಹಕರ ಹಿತ ಚಿಂತನಾ ಸಭೆಯಲ್ಲಿ ಮಾತನಾಡಿದರು.

    ಗ್ರಾಹಕ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದ್ದಾಗ ಮೋಸ ಹಾಗೂ ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಮೌಲ್ಯಗಳನ್ನು ತಿಳಿದು ಮೋಸ, ವಂಚನೆಗೆ ಒಳಗಾಗದೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೂಲಕ ತಮ್ಮ ಹಕ್ಕು ಚಲಾಯಿಸಲು ಮುಂದಾಗಬೇಕು ಎಂದರು.

    ಹಿರಿಯ ವಕೀಲ ಡಾ.ರವೀಂದ್ರ ಮಾತನಾಡಿ, ಗ್ರಾಹಕ ಹಕ್ಕುಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅರಿವು ಉಂಟಾಗುತ್ತಿದೆ. ಶ್ರೀಸಾಮಾನ್ಯರು ಗ್ರಾಹಕ ಹಕ್ಕುಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಮಾರಾಟಗಾರರು ಸಹ ಎಚ್ಚರಿಕೆಯಿಂದ ಗ್ರಾಹಕ ಸೇವೆ ಒದಗಿಸಬೇಕು ಎಂದು ಹೇಳಿದರು.


    ಘಟಕದ ನೂತನ ಅಧ್ಯಕ್ಷರಾಗಿ ಸಿ.ಎಸ್.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಡಿ.ಪಿ.ಜಯಕುಮಾರ್, ಸುಬ್ಬರಾವ್, ಸಂಘಟನಾ ಕಾರ್ಯದರ್ಶಿಯಾಗಿ ವಿಕ್ರಂ ಅಯ್ಯಂಗಾರ್, ಸಹ ಕಾರ್ಯದರ್ಶಿಯಾಗಿ ಪಿ.ವಿ.ರಮೇಶ್ ಹಾಗೂ ಆನಂದ್, ಕೋಶಾಧ್ಯಕ್ಷರಾಗಿ ಶ್ರೀಧರ್ ಮೂರ್ತಿ, ಮಹಿಳಾ ಅಧ್ಯಕ್ಷರಾಗಿ ನಾಗಮಣಿ ಹಾಗೂ ಘಟಕದ ವಿವಿಧ ಆಯಾಮಗಳ ಸದಸ್ಯರಾಗಿ ದೊರೆಸ್ವಾಮಿ, ಟಿ.ಎಂ. ಚಂದ್ರಶೇಖರ್, ಎಚ್.ದಾಸಪ್ಪ, ವಿನೋದ್ ಕುಮಾರ್, ಶ್ರೀನಿವಾಸ್, ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದರು.

    ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಶಿಕ್ಷಣ ಕ್ಷೇತ್ರದ ಸಂಚಾಲಕ ಡಾ.ಜಿ.ವಿ.ರವಿಶಂಕರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರಾಜ್ಯ ಸಂಚಾಲಕ ರಾಘವೇಂದ್ರ, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ, ಅಜಯ್ ಶಾಸ್ತ್ರಿ, ಎಸ್.ಎನ್.ರಾಜೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts