More

    ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಮುಂದಾದ ಬಿಡಿಎ

    ಬೆಂಗಳೂರು: ಬಿಡಿಎ ನಿರ್ವಿುಸಿರುವ ಬಡಾವಣೆಗಳಲ್ಲಿ ನಿಮಾಣಗೊಂಡಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ಸಕ್ರಮಗೊಳಿಸುವ ಕೆಲಸಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮುಂದಾಗಿದ್ದಾರೆ. ಎಚ್​ಎಸ್​ಆರ್ ಲೇಔಟ್​ನಲ್ಲಿ 515 ಹಾಗೂ ಪಿಳ್ಳಪ್ಪ ಗಾರ್ಡನ್ 3ನೇ ಹಂತದಲ್ಲಿ 695 ಅಕ್ರಮ ಕಟ್ಟಡಗಳನ್ನು ಗುರುತಿಸಿರುವ ಅಧಿಕಾರಿಗಳು, ಮಾಲೀಕರಿಗೆ ನೋಟಿಸ್ ನೀಡಿ ದಂಡ ಪಾವತಿಸಿ ಸಕ್ರಮಗೊಳಿಸಿ ಕೊಳ್ಳುವಂತೆ ಸೂಚಿಸಿದ್ದಾರೆ.

    ದಂಡ ಎಷ್ಟು?: ಕಟ್ಟಡಗಳು ನಿರ್ಮಾಣಗೊಂಡಿರುವ ಅಳತೆ ಮೇಲೆ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 2030 ಅಳತೆ ನಿವೇಶನದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಶೇ.10. 3040 ನಿವೇಶನದ ಕಟ್ಟಡಗಳಿಗೆ ಶೇ. 25. 4060 ನಿವೇಶನದ ಕಟ್ಟಡಗಳಿಗೆ ಶೇ.40. ಹಾಗೂ 5080 ನಿವೇಶನಗಳಲ್ಲಿನ ಕಟ್ಟಡಗಳಿಗೆ ಶೇ.50 ದಂಡ ವಿಧಿಸಲಾಗುವುದು ಎಂದು ಬಿಡಿಎ ಆಯುಕ್ತ ಡಾ.ಎಚ್.ಆರ್. ಮಹದೇವ್ ತಿಳಿಸಿದ್ದಾರೆ.

    ಇದನ್ನೂ ಓದಿ: ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

    ಕಾಯ್ದೆಗೆ ತಿದ್ದುಪಡಿ: ಉದ್ಯಾನನಗರಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಎರಡು ತಿಂಗಳ ಹಿಂದೆ ಸೆಕ್ಷನ್​ಗೆ (38) ಸರ್ಕಾರ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಜಾರಿಗೊಳಿಸಿತು. 2008ರ ಜೂನ್ ನಂತರ ನಿರ್ವಿುಸಿದ ಕಟ್ಟಡಗಳನ್ನು ದಂಡ ಪಾವತಿಸಿ ಸಕ್ರಮಗೊಳಿಸಲು ಕಾಯ್ದೆ ಅವಕಾಶ ಕಲ್ಪಿಸಲಿದೆ.

    ಇದನ್ನೂ ಓದಿ: ಮ್ಯಾನ್ಮರ್​ ಸುಂದರಿಯ ಸೊಂಟದ ಸುತ್ತಳತೆ ಕೇಳಿದ್ರೆ ತಲೆ ತಿರುಗುತ್ತೆ: ಇದು ವಿಶ್ವದಾಖಲೆಯಂತೆ!

    ಗುರುತಿಸುವುದು ಹೇಗೆ?: ಬೆಂಗಳೂರಿನಲ್ಲಿ ಬಿಡಿಎ 64 ಲೇಔಟ್​ಗಳನ್ನು ನಿರ್ವಿುಸಿದೆ. ಇವುಗಳಲ್ಲಿನ ಅಕ್ರಮ ಕಟ್ಟಡಗಳನ್ನು ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಕ್ಷೆಗಳನ್ನು ಬಳಸಿಕೊಂಡು ಕಟ್ಟಡಗಳನ್ನು ಅಧಿಕಾರಿಗಳು ಗುರುತಿಸುತ್ತಿದ್ದಾರೆ.

    ಸಿವಿಲ್ ಇಂಜಿನಿಯರ್ ನೇಮಕ ಪ್ರಕ್ರಿಯೆ ಗುಮಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts