More

    ರೋಹಿತ್ ಸಾರಥ್ಯದಲ್ಲಿ ಐಸಿಸಿ ಟ್ರೋಫಿ ಜಯ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಾಸ

    ನವದೆಹಲಿ: ರೋಹಿತ್ ಶರ್ಮ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ತೋರಿರುವ ನಿರ್ವಹಣೆ ಅಮೋಘವಾದುದು. ಅವರ ಹಂಗಾಮಿ ಸಾರಥ್ಯದಲ್ಲಿ ಭಾರತ ತಂಡ ಏಷ್ಯಾಕಪ್ ಕೂಡ ಜಯಿಸಿದೆ. ಆಗ ವಿರಾಟ್ ಕೊಹ್ಲಿ ಅವರಿಲ್ಲದೆ ಭಾರತ ತಂಡ ಗೆದ್ದಿತ್ತು. 2022ರಿಂದ 2031ರವರೆಗೆ ಪ್ರತಿವರ್ಷ ಐಸಿಸಿ ಟೂರ್ನಿಗಳು ನಡೆಯಲಿವೆ. ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    ‘ಎಲ್ಲ ಭಾರತೀಯ ಕ್ರಿಕೆಟ್ ಪ್ರೇಮಿಗಳಂತೆ ನಾನೂ, ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಎಲ್ಲವನ್ನೂ ಅಲ್ಲದಿದ್ದರೂ, ಕೆಲವನ್ನಾದರೂ ಗೆಲ್ಲಬೇಕೆಂದು ಬಯಸುತ್ತೇನೆ’ ಎಂದು ಹೇಳಿದ್ದಾರೆ.

    ಉತ್ತಮ ತಂಡವೊಂದು ಹೆಚ್ಚಿನ ನಾಯಕರನ್ನು ಹೊಂದಿರುವುದಿಲ್ಲ. ಈ ಕಾರಣಕ್ಕಾಗಿಯೇ ನಾವು ಏಕದಿನ ಮತ್ತು ಟಿ20 ತಂಡಕ್ಕೆ ಪ್ರತ್ಯೇಕ ನಾಯಕರನ್ನು ಬಯಸಲಿಲ್ಲ ಎಂದು ಸೌರವ್ ಗಂಗೂಲಿ ವಿವರಿಸಿದ್ದಾರೆ.

    ಬಯೋ-ಬಬಲ್‌ಗೆ ಟೆಸ್ಟ್ ತಂಡ
    ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ಟೆಸ್ಟ್ ತಂಡದ ಆಟಗಾರರು ಭಾನುವಾರ ಮುಂಬೈನಲ್ಲಿ ಬಯೋ-ಬಬಲ್ ಪ್ರವೇಶಿಸಿದರು. 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಗುರುವಾರ ಜೊಹಾನ್ಸ್‌ಬರ್ಗ್‌ಗೆ ಪ್ರಯಾಣಿಸಲಿದೆ. ಡಿ. 26ರಿಂದ ಮೊದಲ ಟೆಸ್ಟ್ ನಡೆಯಲಿದೆ. ಕಿವೀಸ್ ವಿರುದ್ಧದ ಸರಣಿಯ ಬಳಿಕ ಆಟಗಾರರು ಕುಟುಂಬದೊಂದಿಗೆ ಕೆಲಕಾಲ ಕಳೆದಿದ್ದರು.

    VIDEO: ಏಕದಿನ ತಂಡದ ನಾಯಕರಾದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ರೋಹಿತ್ ಶರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts