More

    ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಹಾರ್ದಿಕ್ ಪಾಂಡ್ಯಗೆ ಬಡ್ತಿ, ಕನ್ನಡಿಗ ಮನೀಷ್ ಪಾಂಡೆ ಔಟ್

    ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 7 ಕೋಟಿ ರೂ. ಮೌಲ್ಯದ ಎ ಪ್ಲಸ್ ಶ್ರೇಣಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಿಸಿಸಿಐ ಗುರುವಾರ ಪ್ರಕಟಿಸಿದ 2021ರ ಸಾಲಿನ ವಾರ್ಷಿಕ ಗುತ್ತಿಗೆಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ.

    5 ಶ್ರೇಣಿಗಳಲ್ಲಿ ಒಟ್ಟು 28 ಕ್ರಿಕೆಟಿಗರು ಸ್ಥಾನ ಪಡೆದಿದ್ದು, ಕೆಎಲ್ ರಾಹುಲ್ (ಎ ದರ್ಜೆ) ಮತ್ತು ಮಯಾಂಕ್ ಅಗರ್ವಾಲ್ (ಬಿ ದರ್ಜೆ) ಈ ಪಟ್ಟಿಯಲ್ಲಿರುವ ಇಬ್ಬರು ಕನ್ನಡಿಗರಾಗಿದ್ದಾರೆ. ಶುಭಮಾನ್ ಗಿಲ್ ಮತ್ತು ಮೊಹಮದ್ ಸಿರಾಜ್ ಸಿ ಶ್ರೇಣಿಯಲ್ಲಿ ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಬಿಸಿಸಿಐ ಗುತ್ತಿಗೆ ಪಡೆದಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಬಿ ಶ್ರೇಣಿಗೆ ಮತ್ತು ಕುಲದೀಪ್ ಯಾದವ್ ಸಿ ಶ್ರೇಣಿಗೆ ಹಿಂಬಡ್ತಿ ಪಡೆದಿದ್ದಾರೆ. ಕೇದಾರ್ ಜಾಧವ್ ಮತ್ತು ಕನ್ನಡಿಗ ಮನೀಷ್ ಪಾಂಡೆ ಪಟ್ಟಿಯಿಂದ ಹೊರಬಿದ್ದ ಪ್ರಮುಖರಾಗಿದ್ದಾರೆ. ಶಾರ್ದೂಲ್ ಠಾಕೂರ್ ಬಿ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ.

    ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ:
    ಎ ಪ್ಲಸ್ ಗ್ರೇಡ್ (7 ಕೋಟಿ ರೂ): ವಿರಾಟ್ ಕೊಹ್ಲಿ, ರೋಹಿತ್, ಜಸ್‌ಪ್ರೀತ್ ಬುಮ್ರಾ.
    ಎ ಗ್ರೇಡ್ (5 ಕೋಟಿ ರೂ): ಆರ್. ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆಎಲ್ ರಾಹುಲ್, ಮೊಹಮದ್ ಶಮಿ, ಇಶಾಂತ್ ಶರ್ಮ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ.
    ಬಿ ಗ್ರೇಡ್ (3 ಕೋಟಿ ರೂ): ವೃದ್ಧಿಮಾನ್ ಸಾಹ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್ವಾಲ್.
    ಸಿ ಗ್ರೇಡ್ (1 ಕೋಟಿ ರೂ): ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಹರ್, ಶುಭಮಾನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮದ್ ಸಿರಾಜ್.

    ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಜೋಡಿಯ ಮದುವೆಗೆ ಮುಹೂರ್ತ ಫಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts