More

    ದೇಶೀಯ ಕ್ರಿಕೆಟ್ ಆರಂಭಿಸಲು ಬಿಸಿಸಿಐ ಇಟ್ಟ 4 ಆಯ್ಕೆಗಳು ಯಾವುವು ಗೊತ್ತೇ?

    ಮುಂಬೈ: ದೇಶೀಯ ಕ್ರಿಕೆಟ್ ಋತು ಆರಂಭಿಸಲು ತುದಿಗಾಲಲ್ಲಿ ನಿಂತಿರುವ ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಎದುರು 4 ಆಯ್ಕೆಗಳನ್ನು ಇಟ್ಟಿದೆ. ಪೂರ್ಣಪ್ರಮಾಣದ ರಣಜಿ ಟ್ರೋಫಿ ಮಾತ್ರ ಅಥವಾ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮಾತ್ರ ಅಥವಾ ರಣಜಿ-ಮುಷ್ತಾಕ್ ಅಲಿ ಟ್ರೋಫಿ ಎರಡೂ ಅಥವಾ ಮುಷ್ತಾಕ್ ಅಲಿ-ವಿಜಯ್ ಹಜಾರೆ ಏಕದಿನ ಟ್ರೋಫಿ ಆಯೋಜಿಸುವ 4 ಆಯ್ಕೆಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಬಿಸಿಸಿಐ ಪ್ರಸ್ತಾಪಿಸಿದೆ.

    ಡಿಸೆಂಬರ್ 2ರೊಳಗೆ ಉತ್ತರವನ್ನೂ ನೀಡಬೇಕೆಂದು ತಿಳಿಸಿದೆ. ಡಿಸೆಂಬರ್ 20ರಿಂದ ಜನವರಿ 10ರವರೆಗೆ 22 ದಿನಗಳ ಕಾಲ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ, ಜನವರಿ 11ರಿಂದ ಮಾರ್ಚ್ 18ರವರೆಗೆ 67 ದಿನಗಳ ಕಾಲ ರಣಜಿ ಟ್ರೋಫಿ ಅಥವಾ ಜನವರಿ 11ರಿಂದ ಫೆಬ್ರವರಿ 7ರವರೆಗೆ 28 ದಿನಗಳ ಕಾಲ ವಿಜಯ್ ಹಜಾರೆ ಟ್ರೋಫಿ ಆಯೋಜಿಸುವ ಪ್ರಸ್ತಾಪವನ್ನೂ ಬಿಸಿಸಿಐ ನೀಡಿದೆ.

    ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ದೇಶದ 8 ಬಯೋ-ಬಬಲ್ ವಲಯಗಳಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. 38 ತಂಡಗಳನ್ನು ತಲಾ 6 ತಂಡಗಳ 5 ಎಲೈಟ್ ಗುಂಪು ಮತ್ತು 8 ತಂಡಗಳ 1 ಪ್ಲೇಟ್ ಗುಂಪಿನಲ್ಲಿ ವಿಭಾಗಿಸುವ ಪ್ರಸ್ತಾಪ ಇಡಲಾಗಿದೆ. ಪ್ರತಿ ಬಯೋ-ಬಬಲ್ ವಲಯದಲ್ಲೂ ಕನಿಷ್ಠ 3 ತಾಣಗಳಿರುತ್ತವೆ.

    ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts