More

    ಬಿಬಿಎಂಪಿ ಆಸ್ತಿಗಳ ಒತ್ತುವರಿ ತೆರವು ಆರಂಭ

    ಬೆಂಗಳೂರು: ಪಾಲಿಕೆ ಒಡೆತನದ ಆಸ್ತಿಗಳನ್ನು ಗುರುತಿಸಿ ವಶಕ್ಕೆ ಪಡೆ ಯಲು ನಿರ್ಣಯ ಕೈಗೊಳ್ಳಲಾಗಿದ್ದು, ಇದರ ಭಾಗವಾಗಿ ಹೊಂಬೇಗೌಡನಗರ ವಾರ್ಡ್​ನಲ್ಲಿ ಒತ್ತುವರಿಯಾಗಿದ್ದ ಆಸ್ತಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

    ಹೊಂಬೇಗೌಡ ನಗರ ವಾರ್ಡ್​ನ ಬನ್ನೇರುಘಟ್ಟ ರಸ್ತೆ, ಮೈಕೋ ಫ್ಯಾಕ್ಟರಿ ಹಿಂಭಾಗ, ಲಕ್ಕಸಂದ್ರ ಗ್ರಾಮದ ಸರ್ವೆ ನಂಬರ್-14 ಪಾಲಿಕೆ ಆಸ್ತಿಗಳಾಗಿವೆ. ಈ ಭಾಗಗಳಲ್ಲಿ ಅಂದಾಜು 10.04 ಎಕರೆ ಪಾಲಿಕೆಗೆ ಸೇರಬೇಕಾಗಿದ್ದು, ಒತ್ತುವರಿ ತೆರವಿಗೆ ಸೂಚಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

    ನಿರ್ಲಕ್ಷ್ಯಕ್ಕೆ ಶಿಸ್ತುಕ್ರಮ: ಪಾಲಿಕೆಯ ಒಡೆತನದ ಆಸ್ತಿಗಳನ್ನು ಸರ್ವೆ ಮಾಡಿ, ವಶಕ್ಕೆ ಪಡೆಯುವ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ನಾಮಫಲಕ ಅಳವಡಿಸುವಂತೆ ನಿರ್ದೇಶನ ನೀಡಲಾಗಿದೆ. ಪಾಲಿಕೆಯ ಜಾಗ ಒತ್ತುವರಿಗೆ ನಿರ್ಲಕ್ಷ್ಯ ವಹಿಸುವ ಹಾಗೂ ಆಸ್ತಿ ಕಬಳಿಕೆಗೆ ಸಹಾಯ ಮಾಡುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ವಿಶೇಷ ಆಯುಕ್ತರಿಗೆ (ಆಸ್ತಿಗಳು) ಸೂಚಿಸಲಾಗಿದೆ ಎಂದು ಹೇಳಿದರು.

    ಉಪಮೇಯರ್ ರಾಮಮೋಹನ್ ರಾಜು, ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ವಿಶೇಷ ಆಯುಕ್ತ (ಆಸ್ತಿಗಳು) ಜಿ. ಮಂಜುನಾಥ್, ದಕ್ಷಿಣ ವಲಯ ಉಪಆಯುಕ್ತೆ ಲಕ್ಷ್ಮೀದೇವಿ, ಬೆಂ. ನಗರ ಜಿಲ್ಲಾಧಿಕಾರಿ ಇತರರಿದ್ದರು.

    ಬೆಂಗಳೂರು ಸಿಟಿ ವಿವಿ ಆಗಲಿದೆ ಬೆಂ. ಕೇಂದ್ರ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts