More

    45 ಸಾವಿರಕ್ಕೂ ಅಧಿಕ ಅಕ್ರಮ ‘ಎ’ ಖಾತಾ ಆಸ್ತಿ ಪ್ರಮಾಣ ಪತ್ರ ರದ್ದುಪಡಿಸಿದ ಬಿಬಿಎಂಪಿ

    ಬೆಂಗಳೂರು: ರಾಜಧಾನಿಯಲ್ಲಿ ‘ಬಿ’ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ನೀಡಿರುವುದು ಪತ್ತೆಯಾಗಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ, ಅಕ್ರಮವಾಗಿ ಮಾಡಿಕೊಟ್ಟ 45 ಸಾವಿರಕ್ಕೂ ಅಧಿಕ ‘ಎ’ ಖಾತಾ ಆಸ್ತಿಯ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿದೆ.

    ‘ಎ’ ಖಾತೆಯನ್ನು ರದ್ದುಗೊಳಿಸಿ ‘ಬಿ’ ಖಾತೆಗೆ ಸೇರ್ಪಡೆ ಮಾಡುವ ಕಾರ್ಯ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದ್ದು, ಪಾಲಿಕೆ ಕಂದಾಯ ಅಧಿಕಾರಿ (ಆರ್‌ಒ) ಮತ್ತು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ)ಕಚೇರಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ೆಬ್ರವರಿಯಲ್ಲೇ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಸಮತಿಯನ್ನು ಇದಕ್ಕಾಗಿ ರಚಿಸಲಾಗಿದೆ. ಅದರಂತೆ, ನಗರದಲ್ಲಿನ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತೆ ನೀಡುವ ಕುರಿತು ಸಾಕಷ್ಟು ದೂರುಗಳು ಬಂದ ನಂತರ ಈ ಕ್ರಮವನ್ನು ವಹಿಸಲಾಗಿದೆ.

    ಹಿಂದೆ ಪಾಲಿಕೆ ಹಿರಿಯ ಅಧಿಕಾರಿಗಳ ತಂಡ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಅಂಜನಾಪುರದ ಬಿಬಿಎಂಪಿಯ ಕಂದಾಯ ಉಪ ವಿಭಾಗಕ್ಕೆ ಭೇಟಿ ನೀಡಿ, ಅಕ್ರಮ ‘ಎ’ ಖಾತಾ ನೀಡಿದ ಎರಡು ವಾರ್ಡ್‌ಗಳ ದಾಖಲೆ ಪರಿಶೀಲನೆ ಮಾಡಿತ್ತು. ಈ ವೇಳೆ ಕೇವಲ ಎರಡು ವಾರ್ಡ್‌ಗಳಲ್ಲೇ ಬರೋಬ್ಬರಿ 698 ಅಕ್ರಮ ‘ಎ’ ಖಾತೆ ಪ್ರಮಾಣಪತ್ರ ನೀಡಿರುವುದು ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲೇ ಪಾಲಿಕೆ ತನ್ನ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸಮಗ್ರವಾಗಿ ಅಕ್ರಮ ‘ಎ’ ಖಾತಾ ಪ್ರಮಾಣ ಪತ್ರ ನೀಡಿದ ಬಗ್ಗೆ ತನಿಖೆಗೆ ಮುಂದಾಗಿದೆ.

    ಇದನ್ನೂ ಓದಿ:ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಚುನಾವಣೆ ಮುಂದೂಡಲು ಆಗ್ರಹ

    ಈ ಮಧ್ಯೆ ಪಾಲಿಕೆ 64 ಕಂದಾಯ ಉಪ ವಿಭಾಗದ ಸಹಾಯ ಕಂದಾಯ ಅಧಿಕಾರಿಗಳಿಗೆ ತಮ್ಮ ಉಪ ವಿಭಾಗದಲ್ಲಿ ಅಕ್ರಮವಾಗಿ ‘ಎ’ಖಾತಾ ನೀಡಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿದೆ. ಆ ಪ್ರಕಾರ 45,133 ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ನೀಡಿರುವುದು ಪತ್ತೆಯಾಗಿದೆ. ಈವರೆಗೆ ಪತ್ತೆಯಾದ ಅಕ್ರಮ ಆಸ್ತಿಗಳ ದಾಖಲೆಗಳನ್ನು ಪುನರ್ ಪರಿಶೀಲಿಸಿ, ಅಕ್ರಮವಾಗಿ ‘ಎ’ಖಾತಾ ಪ್ರಮಾಣ ಪತ್ರ ನೀಡಿರುವುದು ದೃಢಪಟ್ಟರೇ, ಅಂಥ ಆಸ್ತಿಯನ್ನು ‘ಬಿ’ಖಾತಾ ದಾಖಲೆ ಪುಸ್ತಕಕ್ಕೆ ದಾಖಲಿಸುವಂತೆ ಆಯಾ ವಲಯ ಆಯುಕ್ತರಿಗೆ ಬಿಬಿಎಂಪಿ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts