More

    ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಬಿಬಿಎಂಪಿ ಬಜೆಟ್​ ಮಂಡನೆ

    ಲಾಕ್​ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸೋಮವಾರ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿಯಲ್ಲಿ 2020-21ರ ಅವಧಿಗೆ 10,899 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದೆ.

    ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಬಿಬಿಎಂಪಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಜೆಟ್ ಮಂಡನೆಗೆ ಅನುಮತಿ ಪಡೆದುಕೊಂಡಿತ್ತು. ಅದರಂತೆ ಆರ್ಥಿಕ ವರ್ಷದ ಆರಂಭದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಆಯವ್ಯಯ ಮಂಡಿಸಿದರು. ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮಂಡಿಸಲಾಯಿತು.

    ಬಜೆಟ್ ಮಂಡನೆಗೆ ಮುನ್ನವೇ ಬಜೆಟ್ ಮಂಡನೆ ಕುರಿತಂತೆ ಚರ್ಚೆ ಮಾಡಲು ಅವಕಾಶ ನೀಡಲಾಗು ತ್ತದೆಯೇ ಎಂಬುದನ್ನು ಮನವರಿಕೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದರು. ಬಜೆಟ್ ಭಾಷಣ ನಂತರ ಚರ್ಚೆ ಮಾಡುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಮೇಯರ್ ಹೇಳಿದರೂ, ಈಗಲೇ ಬಜೆಟ್ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಸ್ಪಷ್ಟ ತೀರ್ಮಾನ ತಿಳಿಸಬೇಕು ವಾಜಿದ್ ಅಡ್ಡಿಪಡಿಸಿದರೂ ಬಜೆಟ್ ಮಂಡಿಸಲು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮೇಯರ್ ಗೌತಮ್ುಮಾರ್ ಅವಕಾಶ ಮಾಡಿಕೊಟ್ಟರು.

    ತಡವಾಗಿ ಭಾಷಣ ಆರಂಭ: ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ 12 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಬೇಕಿತ್ತು. ಆದರೆ, ಮೇಯರ್ ಗೌತಮ್ ಕುಮಾರ್, ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅರ್ಧಗಂಟೆ ತಡವಾಗಿ ಆಗಮಿಸಿದರು. 12.45ಕ್ಕೆ ಬಜೆಟ್ ಮಂಡನೆಗೆ ಮೇಯರ್ ಅವಕಾಶ ಮಾಡಿಕೊಟ್ಟರು.

    ಥರ್ಮಲ್ ಸ್ಕ್ರೀನಿಂಗ್

    ಬಜೆಟ್ ಮಂಡನೆ ವೇಳೆ ಸಭಾಂಗಣದಲ್ಲಿ ಮೇಯರ್, ಉಪಮೇಯರ್, ಸಂಸದರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಆಯುಕ್ತರು, ಹಣಕಾಸು ಮತ್ತು ಆಡಳಿತ ವಿಭಾಗ ಸೇರಿ ಕೆಲವು ವಿಶೇಷ ಆಯುಕ್ತರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಒಟ್ಟಾರೆ 50 ಜನರು ಮೀರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಯಿತು. ಸಭೆಗೆ ಆಗಮಿಸುವ ಜನಪ್ರತಿನಿಧಿ ಗಳು, ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.

    ಎಲ್ಲ 8 ವಲಯಗಳಲ್ಲಿ ಭಾಗಿ

    ದೇಶದ 15ಕ್ಕೂ ಹೆಚ್ಚು ಬೃಹತ್ ಮಹಾನಗರ ಪಾಲಿಕೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಿದ ಇತಿಹಾಸವನ್ನು ಬಿಬಿಎಂಪಿ ಸೃಷ್ಟಿಸಿತು. ರಾಜ್ಯ ಸರ್ಕಾರ ಅಭಿವೃದ್ಧಿ್ಧಡಿಸಿದ ಕೆ-ಸ್ವಾ್ಯನ್ ಲಿಂಕ್​ನೊಂದಿಗೆ ಬಜೆಟ್ ಮಂಡನೆ ನೇರ ವೀಕ್ಷಣೆ ಮಾಡಲು ಪಾಲಿಕೆಯ ಎಲ್ಲ 8 ವಲಯಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ನಿಗದಿತ ಸ್ಥಳದಲ್ಲಿ ಹಾಜರಾಗಿ ಬಜೆಟ್​ನಲ್ಲಿ ಭಾಗಿಯಾದರು.

    ಬಿಬಿಎಂಪಿ ಇತಿಹಾಸದಲ್ಲಿ ವಾಸ್ತವಿಕ ಸ್ಥಿತಿ ಅರ್ಥ ಮಾಡಿ ಕೊಳ್ಳಲಾರದೆ ಮಂಡಿಸಲಾದ ಬೋಗಸ್ ಬಜೆಟ್ ಇದಾಗಿದೆ. ಇಂದಿರಾ ಕ್ಯಾಂಟೀನ್​ಗೆ ಹಣ ನೀಡಿಲ್ಲ. ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ಪಿಂಕ್​ಬೇಬಿ ಹಾಗೂ ಮಹಾಲಕ್ಷ್ಮೀ ಯೋಜನೆ ಕೈಬಿಡಲಾಗಿದೆ.

    | ಅಬ್ದುಲ್ ವಾಜಿದ್ ಬಿಬಿಎಂಪಿ ಪ್ರತಿಪಕ್ಷ ನಾಯಕ

    ತೆರಿಗೆ ಸಂಗ್ರಹಣ ಗುರಿಯನ್ನು ಗಣನೀಯವಾಗಿ ಏರಿಕೆ ಮಾಡಲಾಗುತ್ತಿದೆಯಾದರೂ ಸಂಗ್ರಹಣೆಯಲ್ಲಿ ಹಿಂದೆ ಬೀಳುತ್ತಿದೆ. ತೆರಿಗೆ ಸಂಗ್ರಹ ಗುರಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸುವ ವ್ಯವಸ್ಥೆ ರೂಪಿಸುವುದು, ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಿಸುವ ಮೂಲಕ ಅನುದಾನದ ಮೇಲಿನ ಅವಲಂಬನೆಯನ್ನು ಬಿಬಿಎಂಪಿ ಕಡಿಮೆ ಮಾಡಿಕೊಳ್ಳಬೇಕು.

    | ಸಪ್ನಾ ಕರೀಮ್ ಸಾರ್ವಜನಿಕ ಸಬಘಾವಿತ್ವ ವಿಭಾಗ ಮುಖ್ಯಸ್ಥೆ, ಜನಾಗ್ರಹ

    ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಬಿಬಿಎಂಪಿ ಬಜೆಟ್​ ಮಂಡನೆ

    ರಾಷ್ಟ್ರಪತಿ ಭವನದಲ್ಲಿ ಒಂದು COVID19 ಪಾಸಿಟಿವ್ ಕೇಸ್ ಪತ್ತೆ- 125 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts