More

    VIDEO| ಈ ವರ್ಷದ ಅತ್ಯಂತ ಕೆಟ್ಟ ಬೌಲಿಂಗ್​ ಇದಂತೆ: ವೈರಲ್​ ವಿಡಿಯೋ ನೋಡಿದ್ರೆ ನಿಜ ಅಂತಿರಾ!

    ಸಿಡ್ನಿ: ಬಿಗ್​ ಬ್ಯಾಷ್​ ಲೀಗ್​ನ ಬ್ರಿಸ್ಬೇನ್​ ಹೀಟ್​ ತಂಡದ ಆಲ್​ರೌಂಡರ್​ ಆಟಗಾರ ಲೆವಿಸ್​ ಗ್ರೆಗೊರಿಯವರ ಬೌಲಿಂಗ್​ ಎಸೆತ ಇದೀಗ ಭಾರಿ ಚರ್ಚೆಯ ವಿಷಯವಾಗಿದೆ. ಬ್ರಿಸ್ಬೇನ್​ ಹೀಟ್​ ಹಾಗೂ ಹೋಬರ್ಟ್​ ಹರಿಕೇನ್ಸ್​ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್​ ಆಟಗಾರ ಗ್ರೆಗೊರಿ ಎಸೆದ ಚೆಂಡನ್ನು ವರ್ಷದ ಅತಿ ಕೆಟ್ಟ ಎಸೆತ ಎಂದು ಬಣ್ಣಿಸಲಾಗಿದೆ.

    ಹರಿಕೇನ್ಸ್​ ಇನ್ನಿಂಗ್ಸ್​ನ 17ನೇ ಓವರ್​ನಲ್ಲಿ ಗ್ರೆಗೊರಿ ಅವರು ಟೀಮ್​ ಡೇವಿಡ್​ ಅವರಿಗೆ ಬೌಲ್​ ಮಾಡುವಾಗ ಈ ವಿನೂತನ ಪ್ರಸಂಗ ಜರುಗಿದೆ. ಅದರ ಹಿಂದಿನ ಎಸೆತಕ್ಕೆ ಡೇವಿಡ್​ ಸಿಕ್ಸರ್​ ಬಾರಿಸಿದಾಗ ಮುಂದಿನ ಹಾಗೂ ಓವರ್​ನ ಕೊನೆಯ ಎಸೆತದಲ್ಲಿ ಮತ್ತೆ ಸಿಕ್ಸರ್​ ನೀಡಬಾರದು ಎಂಬ ಉದ್ದೇಶದಿಂದ ಬಾಲ್​ ಮಾಡಿದ ಗ್ರೆಗೊರಿಗೆ ನಡೆದಿದ್ದೇ ಬೇರೆ.

    ಇದನ್ನೂ ಓದಿ: 56 ವರ್ಷದ ವ್ಯಕ್ತಿಗೆ 16 ವರ್ಷದ ಬಾಲಕಿ ಜತೆ ಮದುವೆ! ಮದುವೆಯ ಹಿಂದಿತ್ತು ಬಲವಾದ ಕಾರಣ

    ಆಫ್ ಸ್ಟಂಪ್​ ಹೊರಭಾಗದಲ್ಲಿ ಆಫ್​ ಕಟರ್​ ಔಟ್​ಸೈಡ್ ಬೌಲ್​ ಮಾಡಲು ಗ್ರೆಗೊರಿ ಯತ್ನಿಸಿದರು. ಆದರೆ, ಬಾಲ್​ ಗ್ರೆಗೊರಿ ಕೈನಿಂದ ಜಾರಿ ಕ್ರೀಸ್​ನಿಂದ ಮೀಟರ್​ ದೂರ ಸರಿಯುವ ಮೂಲಕ ಅಗಲವಾದ ಎಸೆತಕ್ಕೆ ಕಾರಣವಾಯ್ತು. ಇದನ್ನು ನೋಡಿದ ಕಾಮೆಂಟೇಟರ್ಸ್​ ಸಹ ನಗು ಬೀರಿದರು. ಇತ್ತ ಬಾಲ್​ ಮಾಡುವಾಗಲೂ ನಿಯಂತ್ರಣ ಕಳೆದುಕೊಂಡು ಗ್ರೆಗೊರಿ ಕ್ರೀಸ್​ನಲ್ಲಿ ಉರುಳಿಬಿದ್ದು, ಇದೇನಾಗೋಯ್ತು ಎಂದು ಮುಗುಳ್ನಗೆ ಬೀರುತ್ತಿದ್ದರು. ​

    ಗ್ರೆಗೊರಿ ಎಸೆತವನ್ನು ನೋಬಾಲ್​ ಎಂದು ಪರಿಗಣಿಸಲಾಯಿತು. ಪರಿಣಾಮ ಫ್ರೀಹಿಟ್​ ಪಡೆದ ಡೇವಿಡ್​ ಮತ್ತೆ ಸಿಕ್ಸರ್​ ಬಾರಿಸಿದರು. ಅದೇ ಓವರ್​ನಲ್ಲೆ ಗ್ರೆಗೊರಿ 20 ರನ್​ ಬಿಟ್ಟುಕೊಟ್ಟರು. ಅಂತಿಮವಾಗಿ ಬ್ರಿಸ್ಬೇನ್​ ಹೀಟ್​ ತಂಡ 1 ರನ್​ನಿಂದ ಪಂದ್ಯವನ್ನು ಕೈಚೆಲ್ಲಿತ್ತು.

    ಇದನ್ನೂ ಓದಿ: ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

    ಇನ್ನು ಗ್ರೆಗೊರಿಯವರ ವರ್ಷದ ಕೆಟ್ಟ ಎಸೆತದ ವಿಡಿಯೋವನ್ನು ಕೆಎಫ್​ಸಿ ಬಿಗ್​ ಬ್ಯಾಷ್​ ಲೀಗ್​ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಲೀಗ್​ನ ಗಮನಾರ್ಹ ಎಸೆತವಾಗಿದೆ ಎಂದು ವಿಡಿಯೋ ಕುರಿತು ಬರೆಯಲಾಗಿದ್ದು, ವಿಡಿಯೋ ಭಾರಿ ವೈರಲ್​ ಆಗಿದೆ. (ಏಜೆನ್ಸೀಸ್​)

    ಭಾರತದಲ್ಲೂ ಪತ್ತೆಯಾಯ್ತು ನಿಗೂಢ ಏಕಶಿಲೆ: ಬೆಳಗಾಗುವಷ್ಟರಲ್ಲಿ ಪಾರ್ಕಿನಲ್ಲಿ ಪ್ರತ್ಯಕ್ಷ!

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಶೀಘ್ರವೇ ತರಬೇತಿ: ಇಲ್ಲಿದೆ ಉಪಯುಕ್ತ ಮಾಹಿತಿ

    ನಾಳೆಯಿಂದ ಈ ಫೋನುಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ! ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts