VIDEO| BBKS10: ಬಿಗ್​ ಬಾಸ್​ ಮುಗಿದ ಬಳಿಕ ವರ್ತೂರು-ತನಿಷಾ ಮದುವೆ? ಪವಿ ಬಿಚ್ಚಿಟ್ರು ರೋಚಕ ಸಂಗತಿ!

ವಿಜಯವಾಣಿ-2023-12-22T165011.675
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 11ನೇ ವಾರದ ಅಂತ್ಯದತ್ತ ಸಾಗುತ್ತಿದ್ದು, 10ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಪವಿ ಪೂವಪ್ಪ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಜನರಲ್ಲಿ ಮೂಡಿರುವಂತ ಅಭಿಪ್ರಾಯಗಳು, ಬದಲಾವಣೆಗಳನ್ನು ತಿಳಿದುಕೊಂಡ ಪವಿ, ಈ ರೀತಿ ಮಾತನಾಡಿದ್ದಾರೆ. "ನೀರು ಎರಚುವ ಟಾಸ್ಕ್​ನಲ್ಲೇ ತನಿಷಾ ಅಷ್ಟೊಂದು ಕೋಪದಿಂದ ಆಡುತ್ತಿದ್ದರು. ನಾನು ಮನೆಯೊಳಗೆ ಕಾಲಿಟ್ಟ ತಕ್ಷಣ ತುಂಬ ಚೆನ್ನಾಗಿ ಮಾತನಾಡಿಸಿದರು. ಅದು ನನಗೆ ಡಬಲ್ ಫೇಸ್​ ಅನಿಸಿತು. ಅದು ನನಗೆ ಇಷ್ಟವಾಗಲಿಲ್ಲ" ಎಂದರು.

"ಏಕೆ ಅಂದ್ರೆ ಮುಂದಿನ ವಾರದ ನಾಮಿನೇಷನ್​ಗೆ ಯಾರು ತನ್ನ ಹೆಸರನ್ನು ತೆಗದುಕೊಳ್ಳಬಾರದು ಎಂದು ಸ್ವೀಟ್...ಸ್ವೀಟ್ ಆಗಿ ಮಾತನಾಡುವುದು, ಟಾಸ್ಕ್​ನಲ್ಲಿ ಕಿರುಚುವುದು ಮಾಡುತ್ತಾರೆ. ಸುದೀಪ್ ಸರ್​ ಲೆಟರ್​ ಬರೆದು ಕಳುಹಿಸಿದಾಗ ಲೌಡ್​ ಅಂತ ಬರೆದು, ಸೌಂಡ್​ ಮಾಡಬೇಕು ಎಂದು ತಿಳಿಸಿದ್ದರು. ಆದಾದ ಮೇಲೆ ಅವರು ಅದನ್ನು ಯಾವ ರೀತಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ! ಅದನ್ನು ಹೇಳಿದ ಮೇಲಂತೂ ಹೆಚ್ಚು ಕಿರಾಚುಡುವುದೇ ಆಗಿದೆ" ಎಂದರು.

"ಮನೆಯೊಳಗೆ ಡ್ರಾಮಾ ಮಾಡುವುದು ತನಿಷಾ ಅನಿಸ್ತಾರೆ. ವರ್ತೂರು ಅವರ ಜತೆ ಇರುವುದು........" ಮತ್ತಷ್ಟು ಸಂಗತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net