More

    ಯೇಸುಕ್ರಿಸ್ತ ಶಾಂತಿಯ ಪ್ರತಿರೂಪ, ಧರ್ಮಗುರು ಚಾರ್ಲ್ಸ್ ನೊರೊನ್ಹಾ ಸಂದೇಶ

    ಕುಂದಾಪುರ: ಯೇಸು ಶಾಂತಿ, ಪ್ರೀತಿ, ಕ್ಷಮೆಯ ಪ್ರತಿರೂಪ. ನಾನು ಕ್ಷಮಿಸಿದಂತೆ ನೀವು ಇತರರನ್ನು ಕ್ಷಮಿಸಿ, ನಾನು ಪ್ರೀತಿಸಿದಂತೆ, ನೀವು ಇತರರನ್ನು ಪ್ರೀತಿಸಿ ಎಂದು ತನ್ನ ಶಿಷ್ಯರಿಗೆ ಸಂದೇಶ ನೀಡಿದ್ದು, ನಾವೂ ಅದನ್ನೇ ಪಾಲಿಸಬೇಕು ಎಂದು ಬಸ್ರೂರು ಚರ್ಚ್ ಧರ್ಮಗುರು ಚಾರ್ಲ್ಸ್ ನೊರೊನ್ಹಾ ಹೇಳಿದರು.
    ಕೆಥೊಲಿಕ್ ಸಭಾ ಕುಂದಾಪುರ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾ ಭವನದಲ್ಲಿ ಭಾನುವಾರ ಕ್ರಿಸ್ಮಸ್ ಸೌಹಾರ್ದ ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದರು.

    ಉಡುಪಿ ಸಿಎಸ್‌ಐ ಸಭೆ ಮಾಜಿ ವಲಯಾಧ್ಯಕ್ಷ ಸ್ಟೀವನ್ ಸರ್ವೋತ್ತಮ ಕ್ರಿಸ್ಮಸ್ ಸಂದೇಶ ನೀಡಿದರು. ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷೆ ಮೇಬಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಜಯಪ್ರಕಾಶ್ ಶೆಟ್ಟಿ, ಸಿಎಸ್‌ಐ ಕೃಪಾ ಚರ್ಚ್ ಉಸ್ತುವಾರಿ ಜೊಯೆಲ್ ಸುಹಾಸ್, ಸಹ ಸಂಚಾಲಕ ಜೀವನ್ ಸಾಲಿನ್ಸ್, ಹೆರಿಕ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

    ಕೆಥೊಲಿಕ್ ಸಭಾ ಕುಂದಾಪುರ ಘಟಕ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು. ಬಸ್ರೂರು ಸಂತ ಫಿಲಿಫ್ ನೇರಿ ಚರ್ಚ್ ಸಿ.ಎಸ್.ಐ. ಕೃಪಾ ಚರ್ಚ್ ತಂಡ ಹಾಡು, ನೃತ್ಯ, ಕಿರು ನಾಟಕ ಪ್ರದರ್ಶಿಸಿದರು. ಶೆವೊಟ್ ಪ್ರತಿಷ್ಠಾನದಿಂದ ಮನೆ ಕಟ್ಟಲು ಅಧ್ಯಕ್ಷ ವಿನೋದ್ ಕ್ರಾಸ್ಟೊ ಫಲಾನುಭವಿಗಳಿಗೆ ಸಹಾಯಧನ ವಿತರಿಸಿದರು. ಕಾರ್ಯಕ್ರಮ ಸಂಚಾಲಕ ಪ್ರೀತಮ್ ಡಿಸೋಜ ಸ್ವಾಗತಿಸಿ, ಕೆಥೊಲಿಕ್ ಸಭಾ ವಲಯ ಕಾರ್ಯದರ್ಶಿ ಮೆಲ್ವಿನ್ ಫುರ್ಟಾಡೊ ವಂದಿಸಿದರು. ಶೈಲಾ ಡಿಆಲ್ಮೇಡಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts