More

    ಆರೋಗ್ಯ, ಶಿಕ್ಷಣ, ವಸತಿ ನಿಲಯಗಳಿಗೆ ಪ್ರಮುಖ ಆದ್ಯತೆ: ಎಂ.ಎಸ್.ದಿವಾಕರ

    ಹೊಸಪೇಟೆ: ನೂತನವಾಗಿ ಘೋಷಣೆಯಾಗಿರುವ ಜಿಲ್ಲೆ ಹಿಂದುಳಿದಿದ್ದು, ಬೇರು ಮಟ್ಟದಿಂದ ಇಲಾಖಾವಾರು ಪ್ರಗತಿ ಅವಶ್ಯವಾಗಿದೆ. ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
    ಹೊಸ ಜಿಲ್ಲೆ ಹಿಂದುಳಿದಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪ್ರಭಾರಿ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿದ್ದು ಕಾಳಜಿ ವಹಿಸಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಸತಿ ನಿಲಯಗಳಿಗೆ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ತೋರಬೇಕು ಎಂದು ನಿರ್ದೇಶಿಸಿದರು.
    ಇದಕ್ಕೂ ಮುನ್ನ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮನ್ನು ಪರಿಚಯಿಸಿಕೊಳ್ಳುವ ಜತೆಗೆ ಇಲಾಖೆ ಪ್ರಗತಿಯ ಮಾಹಿತಿ ಪಡೆದರು. ಆ ಪೈಕಿ ಶಾಲಾ ಶಿಕ್ಷಣ ಇಲಾಖೆಗೆ ಸಂಬAಧಿಸಿ ಸರ್ಕಾರಿ, ಅನುದಾನಿತ ಶಾಲೆಗಳ ವಿವರ, ವಿದ್ಯಾರ್ಥಿಗಳ ವಿವರದಾಖಲಾತಿ ಬಗ್ಗೆ ಮಾಹಿತಿ ಪಡೆದ ಅವರು, ಮಕ್ಕಳಿಗೆ ವಿಟಮಿನ್ ಸಿ ಮತ್ತು ಡಿ ಅವಶ್ಯಕತೆ ಹೆಚ್ಚಿರುವ ಕರಿಬೇವು, ನಿಂಬೆಹಣ್ಣು ಗಿಡಗಳನ್ನು ಕಾರಣ ಶಾಲಾ ಆವರಣಗಳಲ್ಲಿ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಲ್ಲಿ ಅಂಗನವಾಡಿಗೆ ದಾಖಲಾದ ಮಕ್ಕಳು, ಲಿಂಗಾನುಪಾತ, ಗರ್ಭಿಣಿಯರ ಮಾಹಿತಿ, ಅಂಗನವಾಡಿ ಕೇಂದ್ರಗಳ ಮಾಹಿತಿ ಸಹ ಪಡೆದುಕೊಂಡರು. ಒಂದನೇ ತರಗತಿಗೆ ಸೇರುವ ಮಕ್ಕಳು ಹಾಗೂ ಹೆರಿಗೆ ಪ್ರಮಾಣ ಸಮಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದರು.
    ಆರೋಗ್ಯ ಇಲಾಖೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳ ವಿವರ, ಸೌಲಭ್ಯಗಳು, ಚಿಕಿತ್ಸೆ ವಿವಿರ ಪಡೆದುಕೊಂಡರು. ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹೆರಿಗೆಗೆ ಸಂಬAಧಿಸಿದAತೆ ಟಾರ್ಗೆಟ್ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಗೆ ಸೂಚಿಸಿದರು.

    ಉಸ್ತುವಾರಿ ಸಚಿವರಿಂದ ತಾಲೂಕುವಾರು ಸಭೆ:
    ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಆಗಸ್ಟ್ ೯ ರಂದು ಹೊಸಪೇಟೆ, ೧೦ ರಂದು ಹರಪನಹಳ್ಳಿ, ೧೧ ರಂದು ಹಗರಿಬೊಮ್ಮನಹಳ್ಳಿ, ೧೨ ರಂದು ಹೂವಿನಹಡಗಲಿ ಹಾಗೂ ೧೪ ರಂದು ಕೂಡ್ಲಿಗಿಯಲ್ಲಿ ಆಯಾ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ವರದಿಗಳೊಂದಿಗೆ ಹಾಜರಾಗಬೇಕು ಎಂದು ನಿರ್ದೇಶಿಸಿದರು.

    ಸಭೆಯಲ್ಲಿ ಜಿ.ಪಂ. ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿ ಬಾಬು ಬಿ.ಎಲ್. ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts