More

    ಬಸವೇಶ್ವರ ಸ್ವಾಮಿ ಮಹಾ ರಥೋತ್ಸವ ಸಂಪನ್ನ

    ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವರ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ, ಜಾನಪದ ಕಲಾಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

    ಚಂದ್ರಶೇಖರಯ್ಯ ಶಾಸ್ತ್ರಿ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾಕೈಂಕರ್ಯಗಳು ನೆರವೇರಿದವು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಹಕ್ಕಲ ಬಸವೇಶ್ವರ ದೇವಸ್ಥಾನದವರೆಗೂ ರಥವನ್ನು ಎಳೆಯಲಾಯಿತು. ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮತ್ತು ನಂದಿಕೋಲು ಉತ್ಸವ, ಹರೂರು ಗ್ರಾಮದ ಶ್ರೀ ಮಾರಿಕಾಂಬೆ ದೇವಿ ಪಲ್ಲಕ್ಕಿ ಹಾಗೂ ಅಂಡಿಗೆ ಗ್ರಾಮದ ನಂದಿಕೋಲು ಉತ್ಸವ ಸಾಂಗವಾಗಿ ನೆರವೇರಿತು. ಬಸವೇಶ್ವರ ಹಾಗೂ ಮಾರಿಕಾಂಬೆ ದೇವತೆ ನಡುವೆ ಓಕುಳಿ, ಉಂಗುರ ಹುಡುಕುವ ಕಾರ್ಯಕ್ರಮಗಳು ನಡೆದವು.
    ಜೇಡಗೇರಿ ಗ್ರಾಮದ ಡೊಳ್ಳು ಕುಣಿತ, ಹಲಗೆ ವಾದನ, ವಾದ್ಯಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಅಂಡಿಗೆ, ಹರೂರು, ತಾವರೇಗೊಪ್ಪ, ಕುಳವಳ್ಳಿ, ಕುಂಬತ್ತಿ, ಕೊಡಕಣಿ, ಉರಗನಹಳ್ಳಿ, ದೇವತಿಕೊಪ್ಪ, ಮಾವಲಿ ಇತರ ಗ್ರಾಮಗಳ ಸಾವಿರಾರು ಮಂದಿ ರಥೋತ್ಸವಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts