More

    ರೇಣುಕಾಚಾರ್ಯ, ಬಸವೇಶ್ವರ, ಸಿದ್ಧರಾಮೇಶ್ವರರ ಉತ್ಸವ

    ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ನಗರದ ಇತರೆ ವೀರಶೈವ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಗದ್ಗುರು ಶ್ರೀರೇಣುಕಾಚಾರ್ಯರ, ಜಗಜ್ಯೋತಿ ಶ್ರೀಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀಸಿದ್ಧರಾಮೇಶ್ವರರ ವೈಭವದ ಉತ್ಸವ ನೆರವೇರಿತು.

    ವಿಶೇಷ ಅಲಂಕೃತ ಹೂವಿನ ಮಂಟಪದಲ್ಲಿ ಮಹನೀಯರ ಜತೆಗೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ಪ್ರತಿಷ್ಠಾಪಿ, ಮಂಗಳ ವಾದ್ಯದೊಂದಿಗೆ ವಿವಿಧಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಎಸ್‌ಐಟಿ ಕಾಲೇಜು ಆವರಣದ ಶಿವ ಗಣಪತಿ ದೇವಸ್ಥಾನದಿಂದ ಆರಂಭವಾದ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವದಿಂದ ಸಾಗಿತು.

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಾಕನಹಳ್ಳಿ ಜಂಗಮ ಮಠದ ಶ್ರೀಗಂಗಾಧರ ಸ್ವಾಮೀಜಿ, ಶಿವಗಂಗೆ ಹೊನ್ನಾದೇವಿ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಶ್ರೀಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿದ್ಧಗಂಗಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ವೀರಶೈವ ಸಮಾಜ ಸೇವಾ ಸಮಿತಿಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸೇವಾ ಸಮಿತಿಯಗೌರವ ಕಾರ್ಯದರ್ಶಿ ಅತ್ತಿರೇಣುಕಾನಂದ, ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ರುದ್ರಕುಮಾರ್‌ಆರಾಧ್ಯ ಮತ್ತಿತರು ಇದ್ದರು.

    ನಾದ ಸ್ವರ, ನಂದಿ ಧ್ವಜ, ವೀರಗಾಸೆ, ಕರಡಿ ವಾದ್ಯ, ನಗಾರಿ, ಕಂಬದಕುಣಿತ, ತಮಟೆ ವಾದ್ಯ, ಚಂಡೆ ವಾದ್ಯ, ಡಂಕ ವಾದ್ಯ, ಹುಲಿವೇಷ ಸೇರಿದಂತೆ ವಿವಿಧಜಾನಪದ ಕಲಾ ತಂಡಗಳ ಪ್ರದರ್ಶನಉತ್ಸವದ ವೈಭವ ಹೆಚ್ಚಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts