More

    ಸಾಧನೆಗೆ ಸ್ಪೂರ್ತಿ ಬಸವ ವಚನ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಕಳಬೇಡ, ಕೊಲಬೇಡ,
    ಹುಸಿಯ ನುಡಿಯಲು ಬೇಡ,
    ಮುನಿಯಬೇಡ,
    ಅನ್ಯರಿಗೆ ಅಸಹ್ಯಪಡಬೇಡ,
    ತನ್ನ ಬಣ್ಣಿಸಬೇಡ,
    ಇದಿರ ಹಳಿಯಲುಬೇಡ,
    ಇದೇ ಅಂತರಂಗ ಶುದ್ಧಿ,
    ಇದೇ ಬಹಿರಂಗ ಶುದ್ಧಿ,
    ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ

    | ಬಸವಣ್ಣ

    ಸಾಧನೆಗೆ ಸ್ಪೂರ್ತಿ ಬಸವ ವಚನ

    ಬಸವಣ್ಣನವರ ವಚನಗಳಲ್ಲಿ ದೈವ ಸಾಕ್ಷಾತ್ಕಾರ ಎದ್ದು ಕಾಣುತ್ತದೆ. ಜತೆಗೆ ಜೀವನದ ಸಾಧನೆಗೆ ಸ್ಪೂರ್ತಿಯಾಗಿದೆ. ಮನುಷ್ಯ ಜೀವನದಲ್ಲಿ ಉನ್ನತಿ ಕಾಣಬೇಕಾದರೆ ಮೂರು ಅಂಶಗಳು ಅತಿ ಮುಖ್ಯ. ಪ್ರಯತ್ನ, ಯೋಗ್ಯತೆ ಮತ್ತು ದೇವರ ಅನುಗ್ರಹ. ಬಸವಣ್ಣನವರ ವಚನಗಳಲ್ಲಿ ಇದನ್ನು ನಾವು ಗಮನಿಸಬಹುದು. ‘ಆನೆ ಮೇಲೆ ಹೋಪನ…’ ಎಂಬ ವಚನದಂತೆ ಸಾಧನೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅನೇಕ ಅಡ್ಡಿಗಳು ಎದುರಾಗಬಹುದು. ಮನಸ್ಸು ಸ್ಥಿರವಾಗಿರಬೇಕು. ಮಾನವ ಪ್ರಯತ್ನಕ್ಕೆ ಈ ವಚನ ಪ್ರೇರಣೆ. ‘ಕೆರೆ, ಹಳ್ಳ, ಬಾವಿಗಳು…’ ಎಂಬ ವಚನದಲ್ಲಿ ಕೆರೆ ಹಳ್ಳ ಬತ್ತಿದರೆ ಕೇವಲ ಪಾಚಿ, ಚಿಪ್ಪುಗಳು ಕಾಣುತ್ತವೆ. ಸಮುದ್ರ ಮೈದೆರೆದರೆ ರತ್ನ ಮುತ್ತು ಕಾಣಬಹುದು. ಅದರಂತೆ ಜ್ಞಾನಿಗಳ ಸ್ವಭಾವ ಯೋಗ್ಯತೆ ಎತ್ತಿ ಹಿಡಿದಿದ್ದಾರೆ. ದೇಹವು ಭಗವಂತ ನುಡಿಸುವ ವೀಣೆ ಎನ್ನುತ್ತದೆ ಉಪನಿಷತ್. ಇದನ್ನು ಸಾಮಾನ್ಯರಿಗೆ ಮನಮುಟ್ಟುವಂತೆ ‘ಎನ್ನ ಕಾಯವ ದಂಡಿಗೆ ಮಾಡಯ್ಯ…’ ಎಂಬ ವಚನದಲ್ಲಿ ದೈವಾನುಗ್ರಹದ ಮಹತ್ವ ಅಡಕವಾಗಿದೆ. ಬಸವಣ್ಣನವರ ಚಿಂತನೆಯಲ್ಲಿ ಭಕ್ತರಿಗೆ ವಿಶೇಷ ಸ್ಥಾನವಿದೆ. ‘ಸಮುದ್ರ ಘನವೆಂಬೆನೆ…’ ಎಂಬ ವಚನ ಇದನ್ನು ಪ್ರತಿಪಾದಿಸುತ್ತದೆ. ಈ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಬದುಕು ನಮ್ಮದಾಗಲು ಸಾಧ್ಯ.

    | ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪಲಿಮಾರು ಮಠ, ಉಡುಪಿ

    ಬಸವಣ್ಣನವರ ಸೆವೆನ್ ಕಮಾಂಡ್​ಮೆಂಟ್ಸ್​: ನಟ ರಮೇಶ್ ಅರವಿಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts