More

    ಬಸವ ಬೋಧನೆಗಳಿಗೆ ವಿನಾಶವೆಂಬುದಿಲ್ಲ: ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ,

    ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ, ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು ನೋಡಯ್ಯ

    | ಬಸವಣ್ಣ

    ಬಸವ ಬೋಧನೆಗಳಿಗೆ ವಿನಾಶವೆಂಬುದಿಲ್ಲ

    ಬಸವಾದಿ ಶರಣರಂಥ ಮಹಾನ್ ಸಾಧಕರಿಗೆ ಅವರ ಸಾಧನೆಯೇ ಅವರ ಬದುಕಿನ ಹೆಗ್ಗುರುತಾಗಿತ್ತು. ಅವರ ಸಾಧನೆಗಳು ಇಂದಿಗೂ ಸ್ಪೂರ್ತಿದಾಯಕ. ಅವರ ಸಮಾಜಮುಖಿ ಪ್ರಯೋಗಗಳು, ಆದರ್ಶಗಳು ಸದಾ ಕಾಲ ಪ್ರೇರಣೆ ನೀಡುತ್ತವೆ. ಬಸವಣ್ಣನವರ ಬದುಕಿನ ದ್ರವ್ಯವೆಂದರೆ ಆದರ್ಶಗಳು ಹಾಗೂ ಈ ಆದರ್ಶಗಳಲ್ಲಿರುವ ಸಂವೇದನೆ. ಬಸವಣ್ಣನವರ ಸಂವೇದನೆಯನ್ನು ನಾವು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಅನ್ಯರ ಕಷ್ಟ ಕಾರ್ಪಣ್ಯಗಳಿಗೆ ತುಡಿಯುವಂಥ ಸಂದರ್ಭವನ್ನು ಜೀವನವಿಡೀ ಅಳವಡಿಸಿಕೊಂಡು ಬಂದಿದ್ದೇವೆ. ಎಂದಿಗೂ ಪ್ರಸ್ತುತವಾಗಿರುವ ಸಮಾಜಮುಖಿ ಪ್ರಯೋಗಗಳು ಹಾಗೂ ಪರಿವರ್ತನೆಗಳನ್ನು ಸಾಧಿಸಿದವರಿಗೆ ಮರಣವಿರುತ್ತದೆ ವಿನಾ ಅವುಗಳನ್ನು ಸಾಧಿಸಿದ ಬಸವಾದಿ ಶರಣರ ತತ್ವ, ಸಿದ್ಧಾಂತಗಳಿಗೆ ಸಾವು ಎಂಬುದಿಲ್ಲ. ಈ ಪ್ರಪಂಚದಲ್ಲಿ ಸೂರ್ಯ, ಚಂದ್ರ, ಪಂಚಭೂತಗಳಿಗೆ ಹೇಗೆ ವಿನಾಶ ಇಲ್ಲವೋ ಹಾಗೆಯೇ ದಾರ್ಶನಿಕ ಬಸವಣ್ಣನ ವಚನ-ಬೋಧನೆ, ಆದರ್ಶಗಳಿಗೆ ಎಂದಿಗೂ ವಿನಾಶ ಎಂಬುದಿಲ್ಲ. ಜಗತ್ತಿನಲ್ಲಿ ಆದರ್ಶಗಳೇ ಶಾಶ್ವತವಾಗಿ ಉಳಿಯುವುದು. ಆಸ್ತಿ, ಹಣ, ಅಂತಸ್ತು ಇತ್ಯಾದಿ ಯಾವುದೂ ಶಾಶ್ವತವಲ್ಲ. ಬಸವಾದಿ ಶರಣರ ನಡೆ ನಮಗೆ ಪ್ರೇರಣೆಯಾಗಿವೆ.

    | ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ

    ಲೋಕ ಇರುವಷ್ಟು ಕಾಲಕ್ಕೂ ಪ್ರಸ್ತುತ: ಡಾ. ನಿರ್ಮಲಾನಂದನಾಥ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts