More

    ಲೋಕ ಇರುವಷ್ಟು ಕಾಲಕ್ಕೂ ಪ್ರಸ್ತುತ: ಡಾ. ನಿರ್ಮಲಾನಂದನಾಥ ಸ್ವಾಮೀಜಿ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಎನ್ನ ನಡೆಯೊಂದು ಪರಿ
    ಎನ್ನ ನುಡಿಯೊಂದು ಪರಿ
    ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ;
    ನುಡಿಗೆ ತಕ್ಕ ನಡೆಯ ಕಂಡಡೆ
    ಕೂಡಲಸಂಗಮದೇವನು
    ಒಳಗಿಪ್ಪನಯ್ಯಾ

    | ಬಸವಣ್ಣ

    ಲೋಕ ಇರುವಷ್ಟು ಕಾಲಕ್ಕೂ ಪ್ರಸ್ತುತ

    ಬಸವಣ್ಣನವರು ಮಹಾನ್ ಮಾನವತಾವಾದಿಯಾಗಿ, ಮಾನವತೆಯ ಸಾರವನ್ನು ಬೋಧಿಸುವ ಸಲುವಾಗಿ ಭುವನದ ಭಾಗ್ಯವಾಗಿ ಅವತರಿಸಿದವರು. ಈ ಲೋಕವನ್ನು ಮಿಥ್ಯ ಎನ್ನದೇ ಇದು ಭಗವಂತನ ಅದ್ಭುತ ಸೃಷ್ಟಿ ಎಂದರು. ಇಳೆಯ ಮೇಲೆ ಜನಿಸಿರುವವರೆಲ್ಲರೂ ದೈವಾಂಶ ಸಂಭೂತರಾಗಿದ್ದು ತಮ್ಮಲ್ಲಿರುವ ದೈವಿಕ ಗುಣವನ್ನು ಪ್ರದರ್ಶಿಸಿದರೆ ಈ ಇಳೆಯೇ ಸ್ವರ್ಗವಾಗುತ್ತದೆ ಎಂದು ಸಾರಿದರು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರಯ್ಯ ಎಂದು ಮರ್ತ್ಯ ಮಹಿಮೆಯನ್ನು, ಮಾನವ ಜನ್ಮದ ಮಹತ್ವವನ್ನೂ ಜನಮನಕ್ಕೆ ಅರುಹಿದರು. ಸಾವಿರಾರು ವರ್ಷಗಳಿಂದ ಹೆಮ್ಮರವಾಗಿ ಬೆಳೆದು ನಿಂತಿದ್ದ ಜಾತಿ ಪದ್ಧತಿಯನ್ನು ಬಲವಾಗಿ ವಿರೋಧಿಸಿದರು. ಮೂಢ ನಂಬಿಕೆಗಳನ್ನು, ತಾರತಮ್ಯಗಳನ್ನು ಇಲ್ಲದಂತೆ ಮಾಡುವುದೇ ಅವರ ಗುರಿಯಾಗಿತ್ತು. ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎನ್ನಬೇಕು ಎಂದು ಬೋಧಿಸಿದರು. ಕಾಯಕ ಸಿದ್ಧಾಂತ- ಬಸವಣ್ಣನವರು ಜಗತ್ತಿಗೆ ನೀಡಿದ ಮತ್ತೊಂದು ಮಹಾನ್ ಕೊಡುಗೆ. ಆಲಸಿತನವನ್ನು, ಸ್ವಾರ್ಥವನ್ನು, ಸಂಗ್ರಹ ಬುದ್ಧಿಯನ್ನು ಸಾಮಾಜಿಕ ಪಿಡುಗುಗಳೆಂದು ಕರೆದರು. ಅಂತೆಯೇ ಜನತೆ ಮುಕ್ತಿಯನ್ನು ಹೊಂದಲು ಭಕ್ತಿಮಾರ್ಗ ಬಹುಮುಖ್ಯವೆಂದು ಸಾರಿದರು. ಅವರ ವಚನಗಳು ಇಂದಿಗೆ ಮಾತ್ರವಲ್ಲ, ಲೋಕ ಇರುವಷ್ಟು ಕಾಲಕ್ಕೂ ಪ್ರಸ್ತುತವಾಗಿರುತ್ತವೆ; ಮನುಷ್ಯ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ.

    | ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ

    ಸಾಧನೆಗೆ ಸ್ಪೂರ್ತಿ ಬಸವ ವಚನ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts