More

    ಎಷ್ಟು ನಡೆದರೋ ಅಷ್ಟು ಮಾತ್ರ ನುಡಿದರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಎಷ್ಟು ನಡೆದರೋ ಅಷ್ಟು ಮಾತ್ರ ನುಡಿದರು!

    ಬಸವಣ್ಣನವರ ವಚನಗಳು ಹಾಗೂ ಬೋಧನೆಗಳು ಎಲ್ಲ ರೀತಿಯಲ್ಲಿಯೂ ಪ್ರಸ್ತುತವೇ. ಇಡೀ ಪ್ರಪಂಚದ ಸಾಹಿತ್ಯದಲ್ಲಿ ವಚನಗಳಷ್ಟು ಸತ್ವಯುತ, ಸರಳ ಅಭಿವ್ಯಕ್ತಿ ಇಂಗ್ಲಿಷ್​ನಲ್ಲೂ ಇಲ್ಲ, ಎಲ್ಲೂ ಇಲ್ಲ. 19ನೇ ಶತಮಾನದವರೆಗೆ ವಚನಗಳನ್ನು ವೇದಗಳ ಉಕ್ತಿಯಂತೆ ಉಪಯೋಗಿಸುತ್ತ ಬಂದೆವು. ಆದರೆ ಸಾಹಿತ್ಯ ಎಂದು ಪರಿಗಣಿಸಿರಲಿಲ್ಲ. 20ನೇ ಶತಮಾನದಲ್ಲಿ ವಚನ ಸಾಹಿತ್ಯ ಎಷ್ಟು ಶ್ರೀಮಂತ ಮತ್ತು ಭಿನ್ನವಾಗಿದೆ ಎಂಬ ಅರಿವಾಯಿತು. ಅದರಿಂದಾಗಿ ಆ ಅಭಿವ್ಯಕ್ತಿಗೆ ಎಷ್ಟು ಶಕ್ತಿ ಬಂತೆಂದರೆ ಹಲವಾರು ವಚನಕಾರರು ಬಂದರು. ಎಲ್ಲರೂ ಹೇಳಿದ್ದು ತಮ್ಮ ಅನುಭವ. ಅದಕ್ಕೆ ಖಾತ್ರಿ ಯಾರು ಅಂದರೆ ಪೂರ್ವ ಪ್ರಮಾಣಗಳಲ್ಲ. ಪಕ್ಕದ ಶರಣನ ಮಾತೇ ಪ್ರಮಾಣ. ಆ ಹೊಸ ಪ್ರಮಾಣ ಹೇಗೆಂದರೆ ನುಡಿದರೆ ನಡೆ ಖಾಲಿಯಾಗಬೇಕು, ನಡೆದರೆ ನುಡಿ ಖಾಲಿಯಾಗಬೇಕು ಎಂಬ ಪ್ರಮಾಣ. ಎಷ್ಟು ನಡೆದರೋ ಅಷ್ಟು ಮಾತ್ರ ನುಡಿದರು. ನುಡಿ- ನಡೆಗೆ ಸಂಪರ್ಕ ಕಲ್ಪಿಸಿದರು. ನುಡಿ ವ್ಯಕ್ತಿತ್ವದ ಅಭಿವ್ಯಕ್ತಿ. ಎಲ್ಲ ಕಾಲಕ್ಕೂ ಅದು ಪ್ರಮಾಣ, ಪ್ರಸ್ತುತ. ಬಸವಣ್ಣನವರನ್ನು ನಾನು ಹೇಗೆ ಅಳವಡಿಸಿಕೊಂಡೆ ಎಂಬುದನ್ನು ಹೇಳಲಾಗದು. ಹೇಳಿದರೆ ಜಂಭ ಆಗುತ್ತದೆ.

    | ಡಾ. ಚಂದ್ರಶೇಖರ ಕಂಬಾರ ಜ್ಞಾನಪೀಠ ಪುರಸ್ಕೃತ ಸಾಹಿತಿ

    ಪರಿವರ್ತನೆಯ ಬೆಳಕು ಮೂಡಿಸಿದ ಧೀಮಂತ: ಸಿಎಂ ಬಿ.ಎಸ್​.ಯಡಿಯೂರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts