More

    ಬಸವಣ್ಣನ ಆದರ್ಶ ಪಾಲಿಸಿ

    ಮೂಡಲಗಿ: 12ನೆಯ ಶತಮಾನದಲ್ಲಿ ಸಮಾನತೆ ಸಾರಿದ ಬಸವಣ್ಣನವರ ಆದರ್ಶಗಳನ್ನು ಎಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿವಯೋಗೇಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಕಲ್ಲೋಳಿ ಪಟ್ಟಣದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಿಯೋಜಿತ 12 ಅಡಿ ಎತ್ತರದ ಅಶ್ವಾರೂಢ ಕಂಚಿನ ಪುತ್ಥಳಿ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು. ಬಸವೇಶ್ವರ ಪ್ರತಿಮೆ ಸ್ಥಾಪನೆಯ ರೂವಾರಿ, ಮುಖಂಡ ಈರಪ್ಪ ಬೆಳಕೂಡ ಮಾತನಾಡಿ, ಪ್ರತಿಮೆಯನ್ನು 10 ಅಡಿ ಎತ್ತರದ ಸ್ತಂಭದ ಮೇಲೆ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಪುತ್ಥಳಿ ನಿರ್ಮಾಣಕ್ಕಾಗಿ ಹಲವು ಮಹನೀಯರು ದೇಣಿಗೆ ನೀಡಿದ್ದಾರೆ ಎಂದರು.

    ಪಟ್ಟಣದಲ್ಲಿ ಹೊಸದಾಗಿ ತೆರೆಯಲಾಗಿರುವ ಜೆನರಿಕ್ ಔಷಧ ಮಳಿಗೆಯನ್ನು ಡಾ.ಶಿವಾನಂದ ಭಾರತೀ ಸ್ವಾಮೀಜಿ, ಜಿಲ್ಲಾ ನಿವೃತ್ತ ವೈದ್ಯಾಧಿಕಾರಿ ಡಾ.ಅಶೋಕ ಮುರಗೋಡ ಉದ್ಘಾಟಿಸಿದರು. ಡಾ.ಭೋಜರಾಜ ಬೆಳಕೂಡ, ಡಾ.ತುಕಾರಾಮ ಉಮರಾಣಿ, ಪರಪ್ಪ ಮಜ್ಜಿಗ್ಯಾರ, ಗಿರಿಮಲ್ಲಪ್ಪ ಸವಸುದ್ದಿ, ರಮೇಶ ಬೆಳಕೂಡ, ಡಾ.ಮಹಾದೇವ ಹೆಬ್ಬಾಳ, ಮಲ್ಲಪ್ಪ ಕಡಾಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts