More

    ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

    ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

    ಕಾಲೇಜಿನ ಪ್ರವೇಶದ್ವಾರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಿದ ಎವಿವಿಪಿ ವಿಭಾಗ ಸಂಚಾಲಕ ಸಚಿನ್ ಕುಳಗೇರಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆ ಮಾಡಿಲ್ಲ ಎಂದು ಎಬಿವಿಪಿ ಕಾರ್ಯಕರ್ತರಿಗೆ ತಿಳಿಸಿದಾಗ, ಕಾಲೇಜಿಗೆ ಆಗಮಿಸಿದ ಕಾರ್ಯಕರ್ತರು ಜಯಂತಿ ಆಚರಣೆಗೆ ಅನುಮತಿ ಕೇಳಿದಾಗ ಪ್ರಾಚಾರ್ಯೆ ರೇಣುಕಾ ರೆಡ್ಡಿ ಅವರು ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರ ಅನುಮತಿ ಕೇಳುತ್ತೇನೆ ಎನ್ನುತ್ತಾರೆ.

    ಆದರೆ, ಸರ್ಕಾರದ ಆದೇಶ ಇದ್ದರೂ, ಏಕೆ ಜಯಂತಿ ಆಚರಿಸಲಿಲ್ಲ? ಎಂದು ಪ್ರಶ್ನಿಸಿದರೆ ನಾವೇ ನಾಲ್ಕು ಜನ ಸೇರಿ ಜಯಂತಿ ಆಚರಿಸುತ್ತೇವೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇವರು ಯಾರ ಅನುಮತಿ ಮೇರೆಗೆ ಕಾಲೇಜ್ ಕ್ಯಾಂಪಸ್‌ನಲ್ಲಿ ಹೊಸ ವರ್ಷ ಆಚರಣೆ ಮಾಡಿದರು? ಎಂದು ಎಬಿವಿಪಿ ಕಾರ್ಯಕರ್ತರು ಪ್ರಶ್ನಿಸಿದರಲ್ಲದೇ ಇಂಥ ಪ್ರಾಚಾರ್ಯರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

    ಎಬಿವಿಪಿ ತಾಲೂಕು ಸಂಚಾಲಕ ಶಿವಾನಂದ ಬೆಲ್ಲದ ಮಾತನಾಡಿ, ಕಾಲೇಜಿನ ಪ್ರಾಚಾರ್ಯರು ವಿವೇಕಾನಂದರ ವಿರೋಧ ನೀತಿ ಅನುಸರಿಸುತ್ತಿದ್ದು, ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ. ಮಾಹಿತಿ ಕೇಳಿದ ವಿದ್ಯಾರ್ಥಿಗಳ ಭಾವಚಿತ್ರ ಮೊಬೈಲ್‌ನಲ್ಲಿ ಸೆರೆ ಹಿಡಿದು, ‘ಪರೀಕ್ಷೆ ಬರಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದು ಆವಾಜ್ ಹಾಕುತ್ತಾರೆ, ಯಾವುದಾದರೂ ದಾಖಲೆಗಳಿಗೆ ವಿದ್ಯಾರ್ಥಿಗಳು ಸಹಿ ಮಾಡಿಸಿಕೊಳ್ಳಲು ಹೋದರೆ 2-3 ಗಂಟೆ ಕಾಯಿಸುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕಿದ್ದ ಪ್ರಾಚಾರ್ಯರೇ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.

    ನಗರ ಕಾರ್ಯದರ್ಶಿ ಸಂತೋಷ ಪಟೇದ, ಮುತ್ತು ಹಾಲಿಹಾಳ, ಹಣಮಂತ ಹಾದಿಮನಿ, ಪರಸು ಮ್ಯಾಗೇರಿ, ವಿಜಯಕುಮಾರ ಓಂಕಾರ, ಶಿವು ದೊಡಮನಿ, ಬಸವರಾಜ ಬೇಲಿ, ಭೀಮು ನಾಗರಾಳ, ಸಂಜು ತಳವಾರ, ತಾನಾಜಿ ತಿಳಗೋಳ, ಅಯ್ಯಪ್ಪ ಕಡ್ಲಿಮಟ್ಟಿ, ಮದನ ಕಟ್ಟಿಮನಿ, ಸಿದ್ದು ಅಂಗಡಿ, ಪರಸು ಕಲ್ಯಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts