More

    ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಹೆಸ್ಕಾಂ ನೌಕರರ ಖಂಡನೆ

    ಬಸವನಬಾಗೇವಾಡಿ: ಕರ್ನಾಟಕ ವಿದ್ಯುತ್ ನಿಗಮ(ಕಂಪನಿ)ಗಳನ್ನು ಖಾಸಗೀಕರಣಗೊಳಿಸಲು ಮುಂದಾದ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಹೆಸ್ಕಾಂ ನೌಕರರ ಸಂಘ ಹಾಗೂ ಇಂಜಿನಿಯರ್‌ಗಳ ಸಂಘದ ನೇತೃತ್ವದಲ್ಲಿ ಪಟ್ಟಣದ ತೆಲಗಿ ರಸ್ತೆಯ ಹೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗದಲ್ಲಿ ನೌಕರರು ಕೈಗೆ ಪಟ್ಟಿ ಧರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

    ವಿಭಾಗೀಯ ಲೆಕ್ಕಾಧಿಕಾರಿ ಹಣಮಂತಪ್ಪ ಉಳ್ಳಾಗಡ್ಡಿ, ಎಇಇ ವಿಜಯಕುಮಾರ ಬಿರಾದಾರ, ಶಾಖಾಧಿಕಾರಿ ಚನಗೌಡ ಪಾಟೀಲ, ಎಇ ಚಂದ್ರಶೇಖರ ರೆಡ್ಡಿ, ಲಕ್ಷ್ಮಿಹಿಟ್ನಳ್ಳಿ, ಮಂಜು ಈಳಗೇರ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ನೌಕರರು ಹಗಲು-ರಾತ್ರಿ ಎನ್ನದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಂಪನಿಗಳು ಲಾಭದಲ್ಲಿಲ್ಲ ಎಂದು ಖಾಸಗೀಕರಣ ಮಾಡಲು ಹೊರಟಿದ್ದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

    ಯುನಿಯನ್ ತಾಲೂಕಾಧ್ಯಕ್ಷ ಸುರೇಶ ಕಲ್ಲೂರ, ರಮೇಶ ಮಲಘಾಣ, ಬಿ.ಎಂ. ಬೆಣ್ಣೂರ, ಎಸ್.ಎಂ. ಕೆಂಗನಾಳ, ಪ್ರವೀಣ ನಾಗರಾಳ, ಸುಭಾಸ ನಾಶಿ, ಎಂ.ಎಸ್. ತಳವಾರ, ಶರಣು ಗೊಳಸಂಗಿ, ರವೀಂದ್ರ ಹೊಸಮನಿ, ಪಾರ್ವತಿ ಗಾಣಗೇರ, ಎಸ್.ಎಸ್.ಕ್ವಾಟಿ, ಯಲ್ಲಮ್ಮ ಕಮತರ, ಸುಧಾ ಪತ್ತಾರ, ಶಿಲ್ಪಾ ಪೂಜಾರಿ, ಸವಿತಾ ಮಟ್ಯಾಳ, ರೇಣುಕಾ ಚವಾಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts