More

    ಸಮಿತಿ ವರದಿ ಬಳಿಕ ತೀರ್ಮಾನ: ಡಿಸಿಎಂ ಲಕ್ಷ್ಮಣ ಸವದಿ

    ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಬಗ್ಗೆ ಸಮಿತಿ ವರದಿ ಬಳಿಕ ತೀರ್ಮಾನಿಸಲಾಗುವುದೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಈಗಾಗಲೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆ ಇದ್ದು, ಈ ಕುರಿತು ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಬಳಿಕ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

    ಸಾರಿಗೆ ಇಲಾಖೆಯ ಅಂತರ ವಿಭಾಗದ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ತಾಂತ್ರಿಕ ದೋಷಗಳಿವೆ. ಬಿಎಂಟಿಸಿ ನೌಕರರೂ ಬೇರೆ ಜಿಲ್ಲೆಗಳಿಗೆ ತೆರಳಲು ಅನುಕೂಲ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಬಿಎಂಟಿಸಿ ನೌಕರರು ಮಾಸಿಕ 40 ಸಾವಿರ ರೂ. ಸಂಬಳ ಪಡೆಯುತ್ತಿದ್ದರೆ, ಇನ್ನುಳಿದ ವಿಭಾಗಗಳಲ್ಲಿ ಅಷ್ಟೊಂದು ಸಂಬಳ ನೀಡಲು ಕಷ್ಟಕರವಾಗುತ್ತದೆ. ಆಯಾ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ಸಂಬಳ ವಿಷಯದ ತಾಂತ್ರಿಕ ತೊಂದರೆಯೂ ದೂರವಾಗುತ್ತದೆ ಎಂದರು.

    ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭು ದೇಸಾಯಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಅನಿಲ ಅರಕೇರಿ ಮತ್ತಿತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts