More

    ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಗ್ರಾಹಕರ-ಸದಸ್ಯರ ಸ್ನೇಹಿಯಾಗಿ ಸಂಸ್ಥೆ ಮುನ್ನಡೆಸುವೆ

    ಬಸವನಬಾಗೇವಾಡಿ: ಹಲವು ವರ್ಷಗಳಿಂದ ನಿರ್ದೇಶಕರ ಹಾಗೂ ಸಿಬ್ಬಂದಿ ಸಹಕಾರದಿಂದ ಬ್ಯಾಂಕ್ ಲಾಭದತ್ತ ಮುನ್ನಡೆದಿದ್ದು, ಇದೀಗ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದೆ. ಗ್ರಾಹಕರ ಸದಸ್ಯರ ಸ್ನೇಹಿಯಾಗಿ ಸಂಸ್ಥೆ ಮುನ್ನಡೆಸಲು ಸಾಮೂಹಿಕ ಪ್ರಯತ್ನ ಮಾಡಲಾಗುವುದೆಂದು ಶ್ರೀ ಬಸವೇಶ್ವರ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.

    ಪಟ್ಟಣದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಆಡಳಿತ ಮಂಡಳಿ ನಿರ್ದೇಶಕರು ಬ್ಯಾಂಕ್‌ನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದಾರೆ. ಅಧಿಕಾರ ಚುಕ್ಕಾಣಿ ನನಗೆ ನೀಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತ ಸದಸ್ಯರ ವಿಶ್ವಾಸಕ್ಕೆ ಬದ್ಧನಾಗಿ ಸಾಮೂಹಿಕವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

    ಬ್ಯಾಂಕ್ 70 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 65 ಕೋಟಿ ರೂ. ಸಾಲ ವಿತರಿಸಲಾಗಿದೆ. 5 ಶಾಖೆಗಳ ಮೂಲಕ ಗ್ರಾಹಕರ ಸ್ನೇಹಿಯಾಗಿ ಬ್ಯಾಂಕ್ ಲಾಭದತ್ತ ಮುನ್ನಡೆದಿದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬ್ಯಾಂಕ್ ಹಿತದೃಷ್ಟಿಯಿಂದ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಸದಸ್ಯರು ಚುನಾವಣೆಯಲ್ಲಿ ನಮ್ಮ ಗುಂಪಿಗೆ ಅರ್ಹ ಜಯ ದೊರಕಿಸಿಕೊಟ್ಟಿದ್ದಾರೆ. ದಿ. ಆರ್.ಎಂ. ದುಂಬಾಳಿಯವರ ನಂತರದಲ್ಲಿ ಬ್ಯಾಂಕ್ ಜವಾಬ್ದಾರಿ ವಹಿಸಿಕೊಂಡ ಅಗರವಾಲರು ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

    ಉಪಾಧ್ಯಕ್ಷ ಬಸವರಾಜ ಗೊಳಸಂಗಿ, ಮುಖಂಡರಾದ ಸುಭಾಷ್ ಚಿಕ್ಕೊಂಡ, ಶೇಖರ ಗೊಳಸಂಗಿ, ಬಾಲಚಂದ್ರ ಮುಂಜಣ್ಣಿ, ಅನೀಲ ಪವಾರ, ಶೇಖರಗೌಡ ಪಾಟೀಲ, ಬಬಲು ಅಗರವಾಲ, ಹರೀಶ ಅಗರವಾಲ, ಭರತು ಅಗರವಾಲ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಹಿರೇಮಠ, ನಿರ್ದೇಶಕರಾದ ವೀರಬಸಪ್ಪ ದುಂಬಾಳಿ, ಶ್ರೀಶೈಲ ಪತ್ತಾರ, ಉಮೇಶ ಹಾರಿವಾಳ, ಗುರುಸಂಗಪ್ಪ ಹಳ್ಳೂರ, ಯಮನಪ್ಪ ನಾಯ್ಕೋಡಿ, ರಮೇಶ ಯಳಮೇಲಿ, ನೀಲಪ್ಪ ನಾಯಕ, ಬಸವರಾಜ ಚೌರಿ, ಕಮಲಾ ತಿಪ್ಪನಗೌಡರ, ಸುಮಿತ್ರಾಬಾಯಿ ಪಟ್ಟಣಶೆಟ್ಟಿ ಮತ್ತಿತರರಿದ್ದರು.

    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
    ಪಟ್ಟಣದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ 2019-20 ರಿಂದ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಲೋಕನಾಥ ಅಗರವಾಲ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು-ಬೆಂಬಲಿಗರು, ನಿರ್ದೇಶಕರು ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts