More

    ಬಸವಕಲ್ಯಾಣ ಉಪ ಸಮರ: ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿ ಶರಣು ಸಲಗರ

    ಬೀದರ್​: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ​ ಅವರು 20,904 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ. ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟ ಶರಣು ಸಲಗಾರಗೆ ರಾಜಕೀಯ ಕೈ ಹಿಡಿದಿದೆ. ಒಟ್ಟು 70,556 ಮತಗಳಿಸಿ ಗೆಲುವಿನ ನಗೆ ಬೀರಿದ್ದಾರೆ.

    50108 ಮತಗಳನ್ನು ಪಡೆದ ಕಾಂಗ್ರೆಸ್​ ಅಭ್ಯರ್ಥಿ ಮಾಜಿ ಶಾಸಕ ದಿ. ಬಿ.ನಾರಾಯಣರಾವ್​ರ​ ಪತ್ನಿ ಮಾಲಾ(ಮಲ್ಲಮ್ಮ) 2ನೇ ಸ್ಥಾನ ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾಗೆ ಕೇವಲ 9390 ಮತಗಳು ಲಭಿಸಿವೆ. ಇನ್ನು ಜೆಡಿಎಸ್​ನಿಂದ ಸೈಯದ್​ ಅಲಿ ಖಾದ್ರಿ 11390 ಮತ ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿಗೆ ಆರಂಭದಲ್ಲಿ ಬಂಡಾಯದ ಬಿಸಿ ತಾಗಿತ್ತಾದರೂ ಮತದಾರರು ಶರಣು ಸಲಗರ​ಗೆ ಮಣೆ ಹಾಕಿದ್ದಾರೆ.

    ಫಲಿತಾಂಶ ಘೋಷಣೆಗೆ ಕ್ಷಣಗಣನೆ ಇರುವಾಗಲೇ ಮತ ಎಣಿಕೆ ಕೇಂದ್ರದ ಬಳಿ ಸಂಸದ ಭಗವಂತ ಖೂಬಾ ಆಗಮಿಸಿದರು. ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಟಿಕೆಟ್ ಕೊಡಿಸುವುದರಿಂದ ಹಿಡಿದು ಉಪ ಚುನಾವಣೆಯಲ್ಲಿ ಸಾಕಷ್ಟು ವಿವಾದಕ್ಕೂ ಭಗವಂತ ಖೂಬಾರ ಹೆಸರು ತಳಕುಹಾಕಿಕೊಂಡಿತ್ತು. ಭಗವಂತ ಖೂಬಾ ಮತ ಎಣಿಕೆ ಕೇಂದ್ರಕ್ಕೆ ಬರುತ್ತಿದಂತೆ ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಶರಣು ಸಲಗರ ಆಶೀರ್ವಾದ ಪಡೆದರು.

    8 ವರ್ಷ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದ ಶರಣು ಸಲಗರ, ನಂತರ ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಕಳೆದ ವರ್ಷ ಲಾಕ್​ಡೌನ್ ವೇಳೆ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಧಾನ್ಯ ವಿತರಿಸಿ ಹಸಿವು ನೀಗಿಸುವ ಕೆಲಸ ಮಾಡಿದ್ದರು. ಇವರ ತಂದೆ ಬಾಬುರಾವ್ ಪ್ರತಿ ಸಂತೆಯಲ್ಲಿ ಜೋಳ ಮಾರಾಟ ಮಾಡುತ್ತಿದ್ದರು. ಕೃಷಿ ಕೆಲಸ ಮಾಡಿಕೊಂಡು, ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡರು. ಇವರ ಪುತ್ರನಿಗೆ ಇಂದು ರಾಜಕೀಯದಲ್ಲಿ ಅದೃಷ್ಟ ಒಲಿದಿದೆ.

    ಮಸ್ಕಿ ಉಪ ಸಮರ: ಮತ‌ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್!

    ಉಪ ಚುನಾವಣೆ ಬೆನ್ನಲ್ಲೇ 6 ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ: ಕುತೂಹಲ ಮೂಡಿಸಿದೆ ಸಿಎಂ ನಡೆ

    18 ಮಂದಿಗೆ ಕರೊನಾ ಅಂಟಿಸಿದ ಒಂದೇ ಒಂದು ಸಿಗರೇಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts