More

    ಮನುಕುಲಕದ ದಾರಿದೀಪ ವಾಲ್ಮೀಕಿ

    ಬಸವಕಲ್ಯಾಣ: ಶ್ರೀ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಜಗತ್ತಿನ ಮನಕುಲದ ಉದ್ಧಾರಕ್ಕಾಗಿ ಶ್ರೇಷ್ಠ ಸಂದೇಶ ಸಾರಿದ್ದಾರೆ. ಆದರ್ಶ ಬದುಕಿನ ಸೂತ್ರಗಳು ಇದರಲ್ಲಿವೆ. ಅವುಗಳನ್ನು ಅಳವಡಿಸಿಕೊಂಡು ಜೀವನ ಹಸನಾಗಿಸಿಕೊಳ್ಳಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.

    ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಯಕ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಸಮಾಜದ ಅಭಿವೃದ್ಧಿಗಾಗಿ ನಾನು ಶ್ರಮಿಸುವುದಾಗಿ ಹೇಳಿದರು.

    ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿದರು. ಮುಡಬಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ತುಕಾರಾಮ ರೊಡ್ಡೆ ವಿಶೇಷ ಉಪನ್ಯಾಸ ನೀಡಿದರು.

    ವೇದಿಕೆಯಲ್ಲಿ ತಹಸೀಲ್ದಾರ್ ಶಾಂತಗೌಡ ಬಿರಾದಾರ, ತಾಪಂ ಇಒ ಮಹಾದೇವ ಬಾಬಳಗಿ, ನಗರ ಸಭೆ ಪೌರಾಯುಕ್ತ ಮನೋಜಕುಮಾರ ಕಾಂಬಳೆ ಇತರರಿದ್ದರು.

    ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಶೈಲ ಕಾಚಾಪುರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶಿವಕುಮಾರ ಜಡಗೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts