More

    ಬಾಹ್ಯಾಕಾಶ ಕ್ಷೇತ್ರದಲ್ಲಿದೆ ವಿಪುಲ ಅವಕಾಶ

    ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಶರಣರು ಜನಸಾಮಾನ್ಯರಿಗೆ ತಿಳಿಯುವಂತೆ ವಚನ ಸಾಹಿತ್ಯ ರಚಿಸಿ ಮಾನವೀಯ ಮೌಲ್ಯ ಬಿತ್ತಿದ್ದಾರೆ. ಇಂತಹ ಶರಣರ ವಚನ ಸಾಹಿತ್ಯ ಶ್ರೇಷ್ಠವಾಗಿದೆ ಎಂದು ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡ ಹೇಳಿದರು.

    ಇಸ್ರೋ ವಿಜ್ಞಾನಿಗಳ ತಂಡದೊಂದಿಗೆ ಬುಧವಾರ ಅನುಭವ ಮಂಟಪಕ್ಕೆ ಭೇಟಿ ನೀಡಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ಸಮಾಜದಲ್ಲಿ ಶಾಂತ ರೀತಿಯಲ್ಲಿ ಬಾಳುವುದನ್ನು ಶರಣರು ವಚನ ಸಾಹಿತ್ಯದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಇಂದು ದೇಶದಲ್ಲಿ ವಿಜ್ಞಾನ ಕ್ಷೇತ್ರ ಬಹಳಷ್ಟು ಬೆಳೆದಿದೆ. ಈ ಕ್ಷೇತ್ರ ಬೆಳೆಯಲು ಸಮಾಜದ ಧಾರ್ಮಿಕ ಗುರುಗಳು, ರಾಜಕೀಯ ಜನಪ್ರತಿನಿಧಿಗಳು ಸಹಾಯ-ಸಹಕಾರ ನೀಡಿದ್ದಾರೆ. ಚಂದ್ರಯಾನ-೩ ಯಶಸ್ವಿಯಾದಾಗ ರಾಷ್ಟçದ ಪ್ರತಿಯೊಬ್ಬ ಪ್ರಜೆ ಸಂಭ್ರಮಿಸಿದ್ದು, ಆ ಅದ್ಭುತ ಕ್ಷಣ ಎಂದಿಗೂ ಮರೆಯಲಾಗದು. ಬಾಹ್ಯಾಕಾಶದಲ್ಲಿ ವಿಪುಲ ಅವಕಾಶಗಳಿದ್ದು, ಸದುಪಯೋಗ ಮಾಡಿಕೊಂಡು ವಿಶ್ವಗುರು ಆಗೋಣ ಎಂದು ಆಶಯ ವ್ಯಕ್ತಪಡಿಸಿದರು.

    ವಿಜ್ಞಾನಿಗಳನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಗುರು ಬಸವಣ್ಣನವರ ನೇತೃತ್ವದಲ್ಲಿ ೧೨ನೇ ಶತಮಾನದಲ್ಲಿ ನಡೆದ ವಚನ ಚಳವಳಿ ಮತ್ತು ಶರಣರ ಕ್ರಾಂತಿ ಕುರಿತು ಮಾಹಿತಿ ನೀಡಿದರು.

    ತಂಡದ ವಿಜ್ಞಾನಿಗಳಾದ ರಮೇಶ ರಾಠೋಡ್, ಅಶೋಕ ಎಸ್., ಸಂಜಯ ಪವಾಲೆ, ವಿಶ್ವನಾಥ ತೀರ್ಲಾಪುರ, ವೀರೇಂದ್ರ ಆರ್.ಕಾಮಶೆಟ್ಟಿ, ಶಿವಕುಮಾರ ಹೆಡಗಾಪುರೆ, ಶರಣಪ್ಪ, ಅಮರೇಶ ವಿ.ಚನ್ನಿ, ಉಮಾಕಾಂತ ಮಿರ್ಜಿ, ಡಾ.ಆನಂದ ಎಸ್., ಗೋವಿಂದ ಲಸೂನೆ, ಆನಂದ ಕುಲಕರ್ಣಿ, ನಗರಸಭೆ ಮಾಜಿ ಸದಸ್ಯ ರವೀಂದ್ರ ಕೋಳಕೂರ, ಅನುಭವ ಮಂಟಪ ವ್ಯವಸ್ಥಾಪಕ ಶಂಕರ ಮದುರಗೈ, ಮಾಣಿಕ ಭುರೆ, ವಿಜಯಕುಮಾರ ಪಾಟೀಲ್, ಗಂಗಾಧರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts