More

    ಪಂಚಮಸಾಲಿ ಮೀಸಲಾತಿ ಹೋರಾಟ; ನಾಳಿನ ಸಭೆಯ ಬಳಿಕ ನಮ್ಮ ನಿರ್ಣಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: 2-ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜವು ಕಳೆದ 2 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದೆ. ಇನ್ನು ಹೋರಾಟ ತಾರ್ಕಿಕ ಅಂತ್ಯ ಕಾಣುವುದರಲ್ಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ಹೊರಹಾಕಿದರು.

    ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವಮೃತ್ಯುಂಜಯ ಸ್ವಾಮೀಜಿ, ಈ ಮೊದಲು ನಮ್ಮ ಸಮುದಾಯಕ್ಕೆ 5% ಮೀಸಲಾತಿ ಇತ್ತು. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಆಗ್ರಹಿಸಿ ಕಳೆದ 2 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಮೀಸಲಾತಿಗಾಗಿ ಆಗ್ರಹಿಸಿ ನಮ್ಮ ಜನರು ಬೀದಿಗಿಳಿದು ಹೋರಾಟ ಮಾಡಿದರು. ಐತಿಹಾಸಿಕ ಪಾದಯಾತ್ರೆ ಮಾಡಿದ್ದೇವೆ. ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮೀಸಲಾತಿ ಕುರಿತು ನಿನ್ನೆ ಕೋರ್ಟ್​ ತಡೆಯಾಜ್ಞೆ ತೆರವು ಮಾಡಿದೆ. ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಬೊಮ್ಮಾಯಿ ನೀಡಿದ ಹೇಳಿಕೆಯನ್ನು ಗಮನಿಸಿದೆವು. ನಾವು 2A ಮೀಸಲಾತಿ ನೀಡುವಂತೆ ಕೇಳಿದ್ವಿ. ಆದರೆ, ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸೋಕೆ ಆಗಲ್ಲ ಬದಲಿಗೆ ಅದೇ ಸೌಲಭ್ಯ ಕೊಡಬಲ್ಲ 2D ಅಡಿಯಲ್ಲಿ 7% ಮೀಸಲಾತಿ ಕೊಟ್ಟಿದ್ದಾರೆ.

    ಪಂಚಮಸಾಲಿ ಮೀಸಲಾತಿ ಹೋರಾಟ; ನಾಳಿನ ಸಭೆಯ ಬಳಿಕ ನಮ್ಮ ನಿರ್ಣಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಆದರೆ, ನಾವು 2A ಆಡಿಯಲ್ಲಿ 15% ಮೀಸಲಾತಿಗಾಗಿ ಆಗ್ರಹಿಸಿದ್ವಿ. ಆದರೆ, ಸರ್ಕಾರ 7% ಎಂದು ಹೇಳುತ್ತಿದೆ. ಸರ್ಕಾರದ ನಿರ್ಧಾರವನ್ನು ಗಮನಿಸಿ ನಾವು ನಮ್ಮ ನಿರ್ಣಯವನ್ನು ಮಂಡಿಸುತ್ತೇವೆ ಎಂದು ಹೇಳಿದ್ದಾರೆ.

    ಶನಿವಾರ ಈ ಬಗ್ಗೆ ಚರ್ಚೆ ಮಾಡಿ ಲೀಗಲ್​ ಟೀಂಗೆ ಕಳುಹಿಸುತ್ತೇವೆ. ಅವರ ಸಲಹೆ ಮೇರೆಗೆ ಹೋರಾಟ ಮುಂದುವರೆಸಬೇಕಾ? ಅಥವಾ ಬೇಡವಾ? ಎಂದು ನಾಳೆ ಕಾರ್ಯಾಕಾರಿಣಿ ಸಭೆ ಬಳಿಕ ತಿಳಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಇದನ್ನೂ ಓದಿ: ಎಸ್ಸಿ ಒಳ ಮೀಸಲಾತಿಗೆ ಅಸ್ತು ಎಂದ ರಾಜ್ಯ ಸರ್ಕಾರ: ಒಕ್ಕಲಿಗರು, ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಘೋಷಣೆ

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ 2 ಬೆಕ್ಕುಗಳನ್ನು ಪತ್ತೆಹಚ್ಚಬಲ್ಲರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts