More

    ಇಂತಹ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ: ಯತ್ನಾಳ್​ ವಾಗ್ದಾಳಿ

    ಬೆಂಗಳೂರು: ಒಡಿಶಾ ಮೂಲದ ಬೌಧ್​ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ ಬರೋಬ್ಬರಿ 290 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದರಲ್ಲಿ 230 ಕೋಟಿ ರೂ. ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಸೇರಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ​​ಕಾಂಗ್ರೆಸ್​ ಪಕ್ಷದ ಒಳಗಿರುವ ಭ್ರಷ್ಟಾಚಾರ ಮಟ್ಟ ಎಲ್ಲೆಯನ್ನು ಮೀರಿದೆ. ಈ ಅಕ್ರಮ ಹಣದ ಮೂಲವೇನು? ಇಷ್ಟೊಂದು ಪ್ರಮಾಣದ ಹಣವನ್ನು ಧೀರಜ್​ ಸಾಹು ಹೇಗೆ ಶೇಖರಿಸಿದ? ಇಂತಹ ಭಾರಿ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ಪಕ್ಷ ರಾಜಕೀಯದಲ್ಲಿ ಹೊಸ ಅಧೋಗತಿಗೆ ಇಳಿದಿದೆ. ಅವರ ಸ್ಥಾನಮಾನದ ಹೊರತಾಗಿ, ಕಾನೂನಿನ ಅಡಿಯಲ್ಲಿ ಇಂಥವರಿಗೆ ಸರಿಯಾದ ರೀತಿಯಲ್ಲಿ ಎಚ್ಚರಿಕೆ ನೀಡಬೇಕು ಎಂದು ಎಕ್ಸ್​ ಖಾತೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ್ದಾರೆ.

    ಎಕ್ಸ್​ ಖಾತೆಯಲ್ಲಿ ಪೊಸ್ಟ್​ ಮಾಡುವ ಜತೆಗೆ ಧೀರಜ್​ ಸಾಹು ಲಿಂಕ್​ ಇರುವ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ ಪತ್ತೆಯಾದ 230 ಕೋಟಿ ರೂಪಾಯಿಗೆ ಸಂಬಂಧಿಸಿದ ವಿಡಿಯೋವನ್ನು ಸಹ ಯತ್ನಾಳ್​ ಶೇರ್​ ಮಾಡಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಡಿ.6ರಂದು ಬೌಧ್​ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 290 ಕೋಟಿ ರೂಪಾಯಿ ದಾಖಲೆಯಿಲ್ಲದ ಹಣ ಪತ್ತೆಯಾಗಿದೆ. ಸುಮಾರು 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಬ್ಯಾಂಕ್​ ಸಿಬ್ಬಂದಿ ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿ ನೋಟು ಎಣಿಸಲು ನಿಯೋಜಿಸಲಾಗಿದ್ದು, ಡಿ.6ರಂದು ಆರಂಭವಾದ ನೋಟು ಎಣಿಕೆ ಮೂರು ದಿನವಾದರೂ ಮುಂದುವರಿದಿದೆ. ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರು ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾದರೆ, ಉಳಿದ ಹಣವನ್ನು ತಿತ್ಲಗಢ, ಸಂಬಲ್ಪುರ್ ಮತ್ತು ರಾಂಚಿಯಲ್ಲಿ ವಶಕ್ಕೆ ಪಡೆಯಲಾಗಿದೆ.

    ಐಟಿ ಭರ್ಜರಿ ಬೇಟೆ, 3 ದಿನ ಕಳೆದ್ರೂ ಮುಗಿದಿಲ್ಲ ನೋಟು ಎಣಿಕೆ! 290 ಅಲ್ಲ 500 ಕೋಟಿ ರೂ. ದಾಟಲಿದೆಯಂತೆ

    ದೇವರಿಗೆ ಚಳಿಯಾಗದಿರಲು ಭಕ್ತರಿಂದ ಸ್ವೆಟರ್, ಶಾಲು ಕಾಣಿಕೆ! ಬಿಸಿ ಬಿಸಿ ನೈವೇದ್ಯವೂ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts