More

    ಯಾವಾಗ ಬಗ್ಗಬೇಕು, ಯಾವಾಗ ಸಿಡಿದೇಳಬೇಕು ಅಂತ ನನಗೆ ಗೊತ್ತಿದೆ: ಯತ್ನಾಳ್

    ಬೆಂಗಳೂರು: ‘‘ರಾಜಕೀಯದಲ್ಲಿ ಯಾವಾಗ ಬಗ್ಗಬೇಕೋ ಆಗ ಬಗ್ಗುತ್ತೇನೆ; ಯಾವಾಗ ಸಿಡಿದೇಳಬೇಕೋ ಆಗ ಸಿಡಿದೇಳುತ್ತೇನೆ. ಈಗ ನಾನು ತಲೆ ಬಗ್ಗಿಸಿದ್ದೇನೆಂದರೆ ಅದರ ಅರ್ಥ ಒಳ್ಳೆಯದಾಗುತ್ತೆ ಅಂತ’’ ಎಂದು ಬಸನಗೌಡ ಪಾಟೀಲ ಯತ್ನಾಳ್ ಮಾರ್ಮಿಕವಾಗಿ ಹೇಳಿದ್ದಾರೆ.

    ಕೆಲವು ಬಿಜೆಪಿ ಶಾಸಕರು ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಯತ್ನಾಳ್, ‘‘ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ಮಾಡಿದ್ದು ನಿಜ, ಕ್ಷೇತ್ರದ ಅನುದಾನದ ಬಗ್ಗೆ ನಮಗೆ ಅಸಮಾಧಾನ ಇರುವುದೂ ನಿಜ’’ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!

    ‘‘ಸುಮ್ಮನಿದ್ದ ಮಾತ್ರಕ್ಕೆ ನಾನು ಮೃದುವಾಗಿದ್ದೇನೆ ಅಂತ ಅಂದುಕೊಳ್ಳೋದು ಬೇಡ. ನಾನು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗುವುದಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ’’ ಎಂದರು. ‘‘ಆದರೆ ಮುಖ್ಯಮಂತ್ರಿಗಳು ಕರೊನಾ ನಿಯಂತ್ರಣದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಆ ವಿಷಯದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಇದನ್ನೂ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರ ಮುಂದೆ ಪ್ರಸ್ತಾಪಿಸಿದ್ದೇವೆ’’ ಎಂದು ಹೇಳಿದರು.

    ಚೀನಾ-ಭಾರತ ಸಂಘರ್ಷ: ಪ್ರಧಾನಿ ಅಧ್ಯಕ್ಷತೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts