More

    ರಾತ್ರಿ 1ರವರೆಗೂ ತೆರೆದಿರುತ್ತೆ ಬಾರ್​: ಬಿಯರ್​, ವೈನ್​​ ಬೆಲೆಯಲ್ಲಿ ಭಾರೀ ಇಳಿಕೆ

    ಚಂಡೀಗಢ್​: ಗುರುಗಾಂವ್​, ಫರಿದಾಬಾದ್​ ಮತ್ತು ಪಂಚಕುಲ ನಗರದಲ್ಲಿ ಇನ್ನು ಮುಂದೆ ಬಾರ್​ಗಳು ರಾತ್ರಿ 1ರವರೆಗೂ ತೆರೆದಿರಲಿವೆ. ಹಾಗೆಯೇ ಬಿಯರ್​ ಮತ್ತು ವೈನ್​ ಬೆಲೆಯೂ ಕಡಿಮೆ ಆಗಲಿದೆ.

    ಹರಿಯಾಣದ ನೂತನ ಅಬಕಾರಿ ನಿಯಮದ ಅನುಸಾರ ಏಪ್ರಿಲ್​ ಒಂದರಿಂದ ಈ ಮೂರು ನಗರಗಳಲ್ಲಿ ಬಾರ್​ಗಳು ರಾತ್ರಿ 1ರವರೆಗೆಗೂ ತೆರೆದಿರಲಿವೆ. ಬಿಯರ್​ ಹಾಗೂ ವೈನ್​ಗಳ ಶುಲ್ಕದಲ್ಲೂ ಸಹ ಭಾರೀ ಪ್ರಮಾಣದ ಇಳಿಕೆಯನ್ನು ಮಾಡಲಾಗಿದ್ದು, ಮದ್ಯಪ್ರಿಯರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಸಿಗಲಿದೆ.

    ಪ್ರತಿ ಬಾರ್​ನ ಪರವಾನಗಿ ಶುಲ್ಕದ ದರವನ್ನು ಇಳಿಸಲಾಗುತ್ತಿದೆ. ರಾತ್ರಿ 11ರವರೆಗೆ ಮಾತ್ರ ಬಾರ್​ ತೆರೆಯಲು ಅವಕಾಶವಿದ್ದಿದ್ದು ಇದೀಗ ಅದನ್ನು ಎರಡು ಗಂಟೆಗಳ ಕಾಲ ವಿಸ್ತರಿಸಲಾಗುತ್ತಿದೆ. 11 ಗಂಟೆಯ ನಂತರ 1 ಗಂಟೆಯವರೆಗೆ ಪ್ರತಿ ಗಂಟೆಗೆ 10 ಲಕ್ಷ ರೂ. ಶುಲ್ಕ ಪಾವತಿಸಿ ಬಾರ್​ಗಳನ್ನು ತೆರೆದಿಡಬಹುದಾಗಿದೆ.

    ಶೇ.3.5 ರಿಂದ ಶೇ.5.5 ಆಲ್ಕೋಹಾಲ್​ ಕಂಟೆಂಟ್​ ಹೊಂದಿರುವ ಬಿಯರ್​ಗಳ ಬಲ್ಕ್​ ಲೀಟರ್​ಗಳ ಮೇಲಿದ್ದ ಶುಲ್ಕವನ್ನು 50ರೂಪಾಯಿಯಿಂದ 40 ರೂಪಾಯಿಗೆ ಇಳಿಸಲಾಗುತ್ತದೆ. ಹಾಗೆಯೇ ಅನೇಕ ವಿಧದ ಬಿಯರ್​ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಭಾರೀ ಪ್ರಮಾಣದ ಇಳಿಕೆಯನ್ನು ತರಲಾಗುತ್ತದೆ. ಅದರ ಜತೆಯಲ್ಲಿ ಸೂಪರ್​ ಮೈಲ್ಡ್​ ಹೆಸರಿನ ಹೊಸ ವಿಧವನ್ನು ತರಲಾಗಿದ್ದು ಅದರ ಮೇಲೆ ಬಲ್ಕ್​ ಲೀಟರ್​ ಒಂದಕ್ಕೆ 35 ರೂ. ಶುಲ್ಕ ವಿಧಿಸಲಾಗುತ್ತದೆ.

    ದೇಶದಲ್ಲಿ ತಯಾರಾಗಿರುವ ಮದ್ಯದ ಬೆಲೆ ಮಾತ್ರ ಕಡಿಮೆಯಾಗದೆ ಹೆಚ್ಚಾಗಲಿದೆ. ಈ ವಿಧದ ಮದ್ಯಕ್ಕೆ ಇದ್ದ ಶುಲ್ಕವನ್ನು 44ರೂ. ಇಂದ 60 ರೂ.ಗೆ ಏರಿಸಲಾಗುತ್ತಿದೆ. ಇಂಡಿಯನ್​ ಮೇಡ್​ ಫಾರಿನ್​ ಲಿಕ್ಕರ್​ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.

    ನೂತನ ಅಬಕಾರಿ ನೀತಿಯ ಪ್ರಕಾರ, ಕಾರ್ಯಕ್ರಮಗಳಲ್ಲಿ ಮದ್ಯ ಸೇವಿಸಲು ನೀಡುವಂತಹ ತಾತ್ಕಾಲಿಕ ಏಕದಿನ ಪರವಾನಗಿ ಪಡೆಯುವುದು ಸುಲಭವಾಗಲಿದೆ. ಆನ್​ಲೈನ್​ನಲ್ಲಿ ಈ ಪರವಾನಿಗಿಯನ್ನು ಪಡೆಯಬಹುದಾಗಿದೆ.

    ನಾಲ್ಕು ಸ್ಟಾರ್​ ಹೊಂದಿರುವ ಹೋಟೆಲ್​ಗಳಲ್ಲಿನ ಬಾರ್​ಗಳ ಪರವಾನಗಿ ಶುಲ್ಕವನ್ನು ವರ್ಷಕ್ಕೆ 38 ಲಕ್ಷದಿಂದ 22.5 ಲಕ್ಷಕ್ಕೆ ಇಳಿಕೆ ಮಾಡಲಾಗುತ್ತಿರುವುದಾಗಿ ತಿಳಿಸಲಾಗಿದೆ. ಮೂರು ಸ್ಟಾರ್ ಹೋಟೆಲ್‌ಗಳ ಪೈಕಿ ಗುರಗಾಂವ್ (20 ಲಕ್ಷ ರೂ) ಮತ್ತು ಫರಿದಾಬಾದ್ (17 ಲಕ್ಷ ರೂ.) ನಗರದ ಹೋಟೆಲ್​ಗಳನ್ನು ಹೊರತುಪಡಿಸಿ ಬೇರೆ ನಗರದ ಹೋಟೆಲ್​ಗಳ ಬಾರ್​ನ ಶುಲ್ಕವನ್ನು 20 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ಇಳಿಸಲಾಗುತ್ತಿದೆ. ಗುರಗಾಂವ್ ಮತ್ತು ಫರಿದಾಬಾದ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಸ್ಟಾರ್ ರಹಿತ ರೆಸ್ಟೋರೆಂಟ್‌ಗಳಲ್ಲಿನ ಬಾರ್‌ಗಳ ಪರವಾನಗಿ ಶುಲ್ಕವನ್ನು 12 ಲಕ್ಷ ರೂ.ಗಳಿಂದ 10 ಲಕ್ಷಕ್ಕೆ ಇಳಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts