More

    ಬರೋಬ್ಬರಿ 2.26 ಕೋಟಿ ರೂ. ದಂಡ ವಸೂಲಿ : 2019ರಲ್ಲಿ ರಾಮನಗರ ಜಿಲ್ಲಾ ಪೊಲೀಸರ ಕಾರ್ಯಾಚರಣೆ

    ರಾಮನಗರ: ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ನಿಯಮ ಜಾರಿಯಾದ ಮೇಲೆ ಜಿಲ್ಲೆಯಲ್ಲಿ ಭರ್ಜರಿ ದಂಡ ವಸೂಲಿಯಾಗಿದ್ದು, 2019ರಲ್ಲಿ ಜಿಲ್ಲಾ ಪೊಲೀಸರು ಬರೋಬ್ಬರಿ 2.26 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಮತ್ತು ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ದಂಡ ಪ್ರಮಾಣವನ್ನು ಹೆಚ್ಚಿಸಿದ ಪರಿಣಾಮ ಜಿಲ್ಲೆಯ ಪೊಲೀಸರು ವ್ಯಾಪಕ ಕಾರ್ಯಾಚರಣೆಗೆ ಇಳಿದಿದ್ದರು. ಇದರ ಪರಿಣಾಮ ಬರೋಬ್ಬರಿ 81,906 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಿಕೊಂಡು 2.26 ಕೋಟಿ ರೂ ದಂಡ ವಸೂಲಿ ಮಾಡಿದ್ದಾರೆ.

    ಅಪಘಾತ ಸಂಖ್ಯೆ ಕಡಿಮೆ: ದಂಡ ಪ್ರಮಾಣ ಹೆಚ್ಚಾದ ಪರಿಣಾಮ ಅಪಘಾತ ಸಂಖ್ಯೆಯಲ್ಲಿ ಕೊಂಚ ಕಡಿಮೆ ಆಗಿದೆ. 2018ನೇ ವರ್ಷಕ್ಕೂ 2019ರಲ್ಲಿಯೂ ನಡೆದಿರುವ ಅಪಘಾತ ಸಂಖ್ಯೆಗಳನ್ನು ಗಮನಿಸಿದಾಗ ಇದು ತಿಳಿದುಬಂದಿದೆ. ಮಾರಣಾಂತಿಕ ಅಪಘಾತಗಳ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಇಳಿಮುಖ ಕಂಡಿದೆ. 2019ರ ಆಗಸ್ಟ್‌ನಿಂದ ಡಿಸೆಂಬರ್ ಅಂತ್ಯಕ್ಕೆ 126 ಮಾರಣಾಂತಿಕ ಅಪಘಾತ ಸಂಭವಿಸಿ 130 ಮಂದಿ ಮೃತಪಟ್ಟಿದ್ದರೆ, ಆದರೆ 2018ರ ಇದೇ ಅವಧಿಯಲ್ಲಿ 154 ಅಪಘಾತ ಪ್ರಕರಣಗಳು ನಡೆದು 161 ಮಂದಿ ಮೃತಪಟ್ಟಿದ್ದರು.

    ಮತ್ತೆ ತಣ್ಣಗಾದ ಪೊಲೀಸರು: ಹೆಲ್ಮೆಟ್ ಕಡ್ಡಾಯ ಮತ್ತು ಸಂಚಾರ ನಿಯಮಗಳ ಪಾಲನೆಯನ್ನು ಬಿಗಿಗೊಳಿಸಿದ್ದ ಜಿಲ್ಲಾ ಪೊಲೀಸರು ಈಗ ತಣ್ಣಗಾದಂತೆ ಕಾಣುತ್ತಿದೆ. ಮೊದಲು ಎಲ್ಲಂದೆರಲ್ಲಿ ಅಡ್ಡಹಾಕಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದರು. ಕೆಲವು ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ರಸ್ತೆಗಿಳಿದು ದಂಡ ವಿಧಿಸಿದ್ದಲ್ಲದೆ, ನಿಯಮ ಉಲ್ಲಂಘಿಸಿದ ತಮ್ಮದೇ ಇಲಾಖೆ ಸಿಬ್ಬಂದಿಗೂ ದಂಡ ವಿಧಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಆದರೆ, ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಸಂಚಾರ ಸೇರಿ ಸಿವಿಲ್ ಪೊಲೀಸರು ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಮೃದುತನ ಪ್ರದರ್ಶನ ಮಾಡುವಂತೆ ಕಾಣುತ್ತಿದೆ.

    ಮತ್ತಷ್ಟು ಗಮನ ಹರಿಸಬೇಕಿದೆ: ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಾಗಿ ಒಂದಿಷ್ಟು ಪ್ರಮಾಣದಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗಿವೆ. ಆದರೂ, ಇದರ ಪ್ರಮಾಣ ಮತ್ತಷ್ಟು ಹೆಚ್ಚ ಬೇಕಿದೆ. ಇದಕ್ಕಾಗಿ ಸ್ವಲ್ಪ ವಿರಾಮದಲ್ಲಿರುವ ಪೊಲೀಸರು ಮತ್ತೆ ಬೀದಿಗಿಳಿದು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಸಂಬಂಧ ಕ್ರಮ ಕೈಗೊಳ್ಳಬೇಕಿದೆ.

    ಆ್ಯಪೆ ಆಟೋಗೆ ನಿರ್ಬಂಧವಿಲ್ಲ: ಹೆದ್ದಾರಿಯಲ್ಲಿ ನಿಯಮ ಮೀರಿ ಆ್ಯಪೆ ಆಟೋಗಳು ಪೊಲೀಸರು ಕಣ್ಣೆದುರೇ ಓಡಾಡುತ್ತಿದ್ದರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿರುತ್ತಾರೆ. ಕೆಲವೊಮ್ಮೆ ಸಮವಸ್ತ್ರದಿಂದ ಆರಂಭಗೊಂಡು ಚಾಲನಾ ಪರವಾನಗಿ ಹೀಗೆ ಎಲ್ಲವನ್ನೂ ಕೇಳುವ ಪೊಲೀಸರು ನಂತರ ತಿಂಗಳುಗಟ್ಟಲೇ ಇವರ ಕಡೆ ಮುಖ ತಿರುಗಿಸಿಯೂ ನೋಡುವುದಿಲ್ಲ. ಇದರಿಂದಾಗಿ ಜಿಲ್ಲೆಯ ಬಹುತೇಕ ಕಡೆ ಆ್ಯಪೆ ಆಟೋಗಳದ್ದೇ ದರ್ಬಾರ್ ಆಗಿದ್ದು, ಇವರ ಬಳಿ ಪ್ರಯಾಣಿಕರ ಪ್ರಾಣಕ್ಕೆ ಬೆಲೆಯೇ ಇಲ್ಲ ಎನ್ನುವಂತೆ ಆಗಿದೆ.

    ಇಲ್ಲಿ ದಂಡ ವಸೂಲಿ ಮಾಡುವುದಷ್ಟೇ ಉದ್ದೇಶವಲ್ಲ. ನಿಯಮ ಉಲ್ಲಂಘನೆ ಆದಾಗ ದಂಡ ವಿಧಿಸಲೇಬೇಕಿದೆ. ನಿಯಮ ಮೀರದಂತೆ ನಡೆದುಕೊಳ್ಳಬೇಕಾದ್ದು ಸಾರ್ವಜನಿಕರ ಕರ್ತವ್ಯ.
    ಡಾ.ಅನೂಪ್ ಎ.ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts