More

    ಬರಗದ್ದೆ ಸೊಸೈಟಿ ಅವ್ಯವಹಾರ: ದೂರು ದಾಖಲು

    ಕುಮಟಾ: 2018-19 ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕಿನಿಂದ ರೈತರ ಉಳಿತಾಯ ಖಾತೆಗೆ ಜಮಾವಾಗಬೇಕಿದ್ದ 75 ಲಕ್ಷ ರೂ ಬೆಳೆ ಸಾಲ ದುರುಪಯೋಗವಾಗಿರುವ ಬಗ್ಗೆ ಕುಮಟಾ ಬರಗದ್ದೆಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ. ಕೃಷಿ ಸಹಕಾರಿ ಸಂಘದ ಅದ್ಯಕ್ಷ ಗಣಪತಿ ಗೋಪಾಲಕೃಷ್ಣ ಹೆಗಡೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಮಾ ಗಣಪತಿ ಭಾಗ್ವತ್ ಇವರು ಸಂಘದ ಅಂದಿನ ಕಾರ್ಯದರ್ಶಿ ಲಕ್ಷ್ಮಣ ಹನುಮಂತ ಪಟಗಾರ ಇವರೊಂದಿಗೆ ಸೇರಿ ಕೆಡಿಸಿಸಿ ಬ್ಯಾಂಕ್ ಹೊನ್ನಾವರ ಶಾಖೆಯ ಸಹಾಯಕ ವ್ಯವಸ್ಥಾಪಕಿ ಶಾಲಿನಿ ಗಣಪತಿ ಭಟ್,ಕುಮಟಾ ಶಾಖೆಯ ಹಿರಿಯ ವ್ಯವಸ್ಥಾಪಕಿ ದಿವ್ಯಾ ಗೋವಿಂದರಾಯ್ ಶಾನಭಾಗ,ನಿವೃತ್ತ ಕಿರಿಯ ವ್ಯವಸ್ಥಾಪಕ ಮಂಜುನಾಥ ದೇವು ಪಟಗಾರ,ಕುಮಟಾ ಶಾಖೆಯ ಕಿರಿಯ ವ್ಯವಸ್ಥಾಪಕಿ ಭಾರತಿ ನರಹರಿ ಶೇಟ್,ಗೋಕರ್ಣ ಶಾಖೆಯ ಕಿರಿಯ ಗುಮಾಸ್ತ ಗೋವಿಂದ ಸುಬ್ರಾಯ ಭಟ್ ಹಾಗು ನಿವೃತ್ತ ಸಿಪಾಯಿ ಪುರುಷೋತ್ತಮ ರಾಮಾ ಗಾವಡಿ ಇವರೊಂದಿಗೆ ಸೇರಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕುಮಟಾ ಪೋಲಿಸರಿಗೆ ದೂರು ನೀಡಿದ್ದಾರೆ.

    ಸೊಸೈಟಿಯಲ್ಲಿ ಅವ್ಯವಹಾರವಾದ ವಿಚಾರ ಕಳೆದ ಹಲವು ವರ್ಷಗಳಿಂದ ಸದ್ದು ಮಾಡುತ್ತಿದೆ. ಗ್ರಾಹಕರು ಕೆಡಿಸಿಸಿ ಬ್ಯಾಂಕ್‌ ಎದುರು ಈ ಹಿಂದೆ ಪ್ರತಿಭಟನೆ ಮಾಡಿದ್ದರು. 2023 ರಲ್ಲಿ ಇದೇ ಗಣಪತಿ ಹೆಗಡೆ ವಿರುದ್ಧ ದಾಖಲೆ ಕಳ್ಳತನದ ದೂರು ದಾಖಲಾಗಿತ್ತು.

    https://www.vijayavani.net/hebbar-reaction-about-bjp-campaning

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts