More

    ಬಿಯರ್​ ಬೇಕು ಎಂದರು, ಕೊಡಲು ನಿರಾಕರಿಸಿದ್ದಕ್ಕೆ ಕುಣಿಯಲಾರಂಭಿಸಿದರು!

    ಬರೇಲಿ: ಭಾರತದ ಕರೊನಾ ಸೋಂಕಿನ ಪ್ರಮುಖ ಕೇಂದ್ರ ಎನಿಸಿರುವ ಮುಂಬೈನಿಂದ ಟ್ರಕ್​ನಲ್ಲಿ ಬಂದು ಸಿಕ್ಕಿಬಿದ್ದಿರುವ ಬಾರ್​ ಡಾನ್ಸರ್​ಗಳನ್ನು ಕ್ವಾರಂಟೈನ್​ ಮಾಡಲಾಗಿದೆ. ಇದೀಗ ಇವರು ತಮಗೆ ಕುಡಿಯಲು ತಂಪಾದ ಬಿಯರ್​ ಕೊಡಬೇಕು ಎಂದು ಹಟ ಹಿಡಿದಿದ್ದಾರೆ. ಕೊಡಲು ನಿರಾಕರಿಸಿದ್ದಕ್ಕೆ ಕ್ವಾರಂಟೈನ್​ನಲ್ಲೇ ಅಶ್ಲೀಲ ನೃತ್ಯ ಪ್ರದರ್ಶಿಸಿದ್ದಾರೆ.

    ಇದು ಉತ್ತರ ಪ್ರದೇಶದ ಮೊರಾದಾಬಾದ್​ನ ಕ್ವಾರಂಟೈನ್​ ಕೇಂದ್ರದಲ್ಲಿ ಕಂಡು ಬಂದ ದೃಶ್ಯ. ವೃತ್ತಿಯಲ್ಲಿ ಬಾರ್​ ಡಾನ್ಸರ್​ಗಳಾಗಿರುವ ಇವರು ಮುಂಬೈನ ವಿವಿಧ ಬಾರ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮ ಜತೆಗಾರರೊಂದಿಗೆ ಇವರೆಲ್ಲರೂ ಟ್ರಕ್​ನಲ್ಲಿ ಉತ್ತರಪ್ರದೇಶದ ಮೊರಾದಾಬಾದ್​ಗೆ ಬಂದಿದ್ದರು. ನಗರದ ಗಡಿಯಲ್ಲಿ ಟ್ರಕ್​ ಅನ್ನು ತಡೆದ ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ 40 ಮಹಿಳೆಯರು, 20 ಪುರುಷರು ಹಾಗೂ 12 ಮಕ್ಕಳು ಇದದ್ದು ಪತ್ತೆಯಾಯಿತು.

    ತಕ್ಷಣವೇ ಇವರೆಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು ಮೊರಾದಾಬಾದ್​ನ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಿದರು. ಇದಾಗಿ ಐದು ದಿನ ಕಳೆಯುವಷ್ಟರಲ್ಲಿ ಐದು ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಇನ್ನಷ್ಟು ಜನರಲ್ಲಿ ಸೋಂಕು ದೃಢಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: 14ರ ಬಾಲೆಗೆ ಲೈಂಗಿಕ ಕಿರುಕುಳ ನೀಡಿದ… ಆತ್ಮಹತ್ಯೆ ಮಾಡಿಕೊಂಡಾಕೆಯ ಶವವನ್ನು ಸಂಭೋಗಿಸಲು ಯತ್ನಿಸಿದ..!

    ಈ ಮಧ್ಯೆ, ಕ್ವಾರಂಟೈನ್​ನಲ್ಲಿ ತಮ್ಮ ಮೇಲ್ವಿಚಾರಣೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರ ಬಳಿ ತಮಗೆ ಬಿಯರ್​ ಬೇಕು ಎಂದು ಕೇಳಿದ್ದಾರೆ. ಅವರು ತಂದುಕೊಡಲು ನಿರಾಕರಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಇದಕ್ಕೂ ಬಗ್ಗದಿದ್ದಾಗ ಕ್ವಾರಂಟೈನ್​ ಕೇಂದ್ರದಲ್ಲೇ ಅಶ್ಲೀಲ ನೃತ್ಯ ಮಾಡಲಾರಂಭಿಸಿದರು ಎನ್ನಲಾಗಿದೆ.

    ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಲ್ಲದೆ, ಗಲಭೆ, ಕೆಲಸ ಮಾಡದಂತೆ ಸರ್ಕಾರಿ ಅಧಿಕಾರಿಗೆ ಅಡ್ಡಿಪಡಿಸಿದ್ದು, ಹಲ್ಲೆ, ಸರ್ಕಾರಿ ಅಧಿಕಾರಿಗಳ ಆದೇಶದ ಉಲ್ಲಂಘನೆ, ಸೋಂಕನ್ನು ಸಾಮೂಹಿಕವಾಗಿ ಹರಡುವ ರೀತಿಯ ನಿರ್ಲಕ್ಷ್ಯಭಾವದ ವರ್ತನೆ ತೋರಿದ ಆರೋಪದಲ್ಲಿ ಆರು ಡಾನ್ಸರ್​ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

    ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts