More

    ಬಾರ್, ರೆಸ್ಟೋರೆಂಟ್ ಆರಂಭಕ್ಕೆ ವಿರೋಧ

    ಸಾಗರ: ತಾಲೂಕಿನ ಆವಿನಹಳ್ಳಿಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಆರಂಭಕ್ಕೆ ಖಂಡಿಸಿ ನ.7ರ ಬೆಳಗ್ಗೆ 9ರಿಂದ ಬೇಡಿಕೆ ಈಡೇರುವವರೆಗೂ ಆವಿನಹಳ್ಳಿ ಸಿಗಂದೂರು ರಸ್ತೆಯ ಆವಿನಹಳ್ಳಿ ವೃತ್ತದಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮದ್ಯಪಾನ ವಿರೋಧಿ ಹೋರಾಟ ಸಮಿತಿ ಲೋಕೇಶ್ ಹುಣಾಲಮಡಿಕೆ ಹೇಳಿದರು.

    ಆವಿನಹಳ್ಳಿ ಭಾಗದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಬಕಾರಿ ಡಿಸಿ ಭರವಸೆ ನೀಡುವವರೆಗೂ ರಸ್ತೆ ತಡೆ ಚಳವಳಿ ಹಿಂಪಡೆಯುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

    ಶನಿವಾರ ಆವಿನಹಳ್ಳಿ ರಸ್ತೆ ಮೂಲಕ ಸಿಗಂದೂರು ಕ್ಷೇತ್ರಕ್ಕೆ ತೆರಳುವವರು, ಸಿಗಂದೂರು ಮೂಲಕ ಸಾಗರ, ವರದಹಳ್ಳಿ ಇನ್ನಿತರೆ ಭಾಗಗಳಿಗೆ ಬರುವ ಪ್ರವಾಸಿಗರು ಪರ್ಯಾಯ ಮಾರ್ಗ ಅನುಸರಿಸಬೇಕು. ಯಾವುದೇ ಕಾರಣಕ್ಕೂ ನಮ್ಮ ಭಾಗದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

    ಹಿಂದಿನಿಂದಲೂ ಆವಿನಹಳ್ಳಿ ಭಾಗದಲ್ಲಿ ಮದ್ಯದಂಗಡಿ ತೆರೆಯಬಾರದೆಂದು ಸಮಿತಿ ಹೋರಾಡುತ್ತಲೇ ಇದೆ. ಕಳೆದ ವರ್ಷ ಅನಧಿಕೃತವಾಗಿ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿ ಅಂಬಾರಗೋಡ್ಲುವಿನಿಂದ ಸಾಗರದವರೆಗೆ ಪಾದಯಾತ್ರೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆದರೆ ಅವರು ಸ್ಪಂದಿಸಿಲ್ಲ ಎಂದು ದೂರಿದರು.

    ಆವಿನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಗಣರಾಜ್ ಕುರುವರಿ, ಸಫಿಯಾ ಅಬೂಬಕರ್, ಮಾಜಿ ಸದಸ್ಯ ದೇವರಾಜ ಕುರುವರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆವಿನಹಳ್ಳಿ ವಿಭಾಗದ ಮೇಲ್ವಿಚಾರಕ ಮಂಜುನಾಥ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts