More

    ಬ್ಯಾಂಕ್‌ನಿಂದ ಶಿಕ್ಷಣಕ್ಕೆ ಪೂರಕ ವಾತಾವರಣ : ಬೆಂಗಳೂರು ಪಶ್ಚಿಮ ವಲಯ ವೃತ್ತ ವ್ಯವಸ್ಥಾಪಕ ವಸಂತ್‌ಕುಮಾರ್ ಹೇಳಿಕೆ

    ಬಿಡದಿ : ಶಿಕ್ಷಣಕ್ಕೆ ಪೂರಕವಾದ ಉತ್ತಮ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯ ಪ್ರವೃತ್ತವಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೆಂಗಳೂರು ಪಶ್ಚಿಮ ವಲಯ ವೃತ್ತ ವ್ಯವಸ್ಥಾಪಕ ವಸಂತ್‌ಕುಮಾರ್ ಹೇಳಿದರು.

    ಬಿಡದಿ ಪುರಸಭಾ ವ್ತಾಪ್ತಿಯ ವಾರ್ಡ್ 22ರ ತಿಮ್ಮೇಗೌಡನದೂಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಭಾನುವಾರ ಬಿಡದಿ ಶಾಖೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ನಡೆದ ಕಂಪ್ಯೂಟರ್, ಪ್ರಿಂಟರ್, ಪ್ಯಾನ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಜೊತೆಗೆ ಸಿಎಸ್‌ಆರ್ ಚಟುವಟಿಕೆಗಳಡಿ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ, ಮೂಲ ಸೌಕರ್ಯದ ಜೊತೆಗೆ ಬ್ಯಾಂಕಿನ ಸೇವೆಯನ್ನು ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಬಿಡದಿ ಶಾಖೆಯ ವ್ಯವಸ್ಥಾಪಕಿ ಶೈಲಜಾ ಆನಂದ್ ಮಾತನಾಡಿ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಿಎಸ್‌ಆರ್ ಚಟುವಟಿಕೆಗಳ ಅನುದಾನ ಪಿಎನ್‌ಬಿ ವಿಕಾಸ್ ಯೋಜನೆಯಡಿ ಶಾಲೆಯನ್ನು ಆಯ್ಕೆ ಮಾಡಿಕೂಂಡು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

    ಸಿಆರ್‌ಪಿ ಸಿದ್ದರಾಜು ಮಾತನಾಡಿ, ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಶಾಲಾ ಕಟ್ಟಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಸರ್ಕಾರಿ ಶಾಲೆಯನ್ನು ಆಯ್ಕೆಮಾಡಿಕೂಂಡು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿ ಉಚಿತವಾಗಿ ಶಾಲೆಗೆ ಬಣ್ಣಲೇಪನ, ಕಂಪ್ಯೂಟರ್, ಪ್ರಿಂಟರ್, ಪ್ಯಾನ್ ವಿತರಣೆ ಮಾಡಿದ ಬ್ಯಾಂಕಿನ ಸಿಬ್ಬಂದಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಗ್ರಾಮದ ಅಭಿವೃದ್ದಿಗಾಗಿ ದಾನಿಗಳು ಬಂದಾಗ ಗ್ರಾಮಸ್ಥರು ಅವರಿಗೆ ಸಹಕಾರ ನೀಡಬೇಕು, ಆಗ ಮಾತ್ರ ಗ್ರಾಮ ಅಭಿವೃದ್ದಿಯತ್ತ ಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೆಂಗಳೂರು ಪಶ್ಚಿಮ ವಲಯ ವೃತ್ತ ಉಪ ವ್ಯವಸ್ಥಾಪಕ ಸಂತೋಷ್‌ಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಎಂಎಸ್.ವಿಜಯಲಕ್ಷ್ಮಿ, ಶಿಕ್ಷಕಿ ಬೋರಮ್ಮ ಗ್ರಾಮದ ಮುಖಂಡರಾದ ಮಂಜುನಾಥ್, ಕಾಳಪ್ಪ ಸೇರಿ ಶಾಲಾ ಮಕ್ಕಳು, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಇದೇ ವೇಳೆ ಬ್ಯಾಂಕಿನ ವತಿಯಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts