More

    ಗದಗ -ಬೆಟಗೇರಿಯಲ್ಲಿ ವಸತಿ ಯೋಜನೆ ಸಾಲ ನೀಡಲು ಬ್ಯಾಂಕ್ ಗಳ ಸಮ್ಮತಿ,

    ಗದಗ: ರಾಜೀವ್ ಗಾಂಧಿ ವಸತಿ ನಿಗಮದಿಂದ ಕೈಗೊಂಡಿರುವ 3630 ಮನೆಗಳ ವಸತಿ ಸಮುಚ್ಚಯ ಯೋಜನೆಗೆ ಸಾಲ ನೀಡಲು ಬ್ಯಾಂಕ್ ಗಳು ಸಮ್ಮತಿ ನೀಡಿವೆ. ಯೋಜನೆಯಡಿಯಲ್ಲಿ  ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಿ ಬ್ಯಾಂಕ್ ಸಾಲ ಪಡೆಯಲು ಒಪ್ಪಿಗೆ ಪತ್ರ ಕೊಟ್ಟರೆ ಅಗತ್ಯ ದಾಖಲೆ ಒದಗಿಸಿದರೆ ಸಾಲ ಮಂಜೂರು ಮಾಡಲು ಸಿದ್ದ ಎಂದು ತಿಳಿಸಿವೆ.

    ಮಂಗಳವಾರ ಬೆಂಗಳೂರಿನ ನಿಗಮದ ಕಚೇರಿಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ  ಎಸ್ ಬಿ ಐ, ಕೆನರಾ, ಐಸಿಐಸಿಐ, ಯೂನಿಯನ್, ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಮುಖ್ಯಸ್ಥರು ಯೋಜನೆಗೆ ಸಾಲ ನೀಡಲು ಒಪ್ಪಿಗೆ ನೀಡಿದರು.

    ಯೋಜನೆಯ ಗುತ್ತಿಗೆ ಸಂಸ್ಥೆ ಯವರಿಗೆ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲು ನಿರ್ದೇಶನ ನೀಡಿದರು. 3630 ಫಲಾನುಭವಿಗಳು ಸಾಲ ಪಡೆಯಲು ಒಪ್ಪಿಗೆ ಪತ್ರ ಕೊಟ್ಟು ಸಾಲ ಮಂಜೂರು ಮಾಡಲು ಬ್ಯಾಂಕ್ ಗಳು ಸಮ್ಮತಿ ನೀಡಿದರೆ ಹಂತ ಹಂತ ವಾಗಿ ಹಣ ಬಿಡುಗಡೆ ಆದರೂ ಮೊದಲ ಹಂತದ ಯೋಜನೆ ಪೂರ್ಣ ಗೊಳಿಸಿ ನಂತರ ಎರಡನೇ ಹಂತದ ಯೋಜನೆ ಪೂರ್ಣ ಗೊಳಿಸುವುದಾಗಿ ಒಪ್ಪಿದರು.

    ಒಟ್ಟಾರೆ ಯೋಜನೆ ಟೆಂಡರ್, ಇದುವರೆಗೂ ಪೂರ್ಣ ಗೊಳಿಸಿರುವ ಮನೆಗಳು, ಪಡೆಯಲಾಗಿರುವ ಹೆಚ್ಚುವರಿ ಹಣ ದ ಬಗ್ಗೆ ಸಚಿವರು ಗುತ್ತಿಗೆ ಸಂಸ್ಥೆ ಯಿಂದ  ಮಾಹಿತಿ ಪಡೆದರು.

    ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts