More

    ಮಣಿಕಂಠ ರಾಠೋಡ್ ಗಡಿಪಾರು ಮಾಡಿ

    ಚಿತ್ತಾಪುರ: ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಪ್ರಕರಣ ದಾಖಲಿಸಿ, ಕೂಡಲೇ ಗಡಿಪಾರು ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಆಗ್ರಹಿಸಿದರು.

    ಮಣಿಕಂಠ ಅವರು ತನ್ನ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹ¯್ಲೆ ಮಾಡಿಸಿz್ದÁರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸ್ ತನಿಖೆ ವೇಳೆ ಹ¯್ಲÉಯಲ್ಲ, ಅಪಘಾತವೆಂಬುದು ಬೆಳಕಿಗೆ ಬಂದಿದೆ. ಕಾರು ಅಪಘಾತವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿ ಕಾನೂನು ದುರುಪಯೋಗ ಮಾಡಿಕೊಂಡಿದ್ದಾರೆ. ಅಪಪ್ರಚಾರ ಮಾಡಿ ಸಚಿವರ ಹೆಸರಿಗೆ ಕಳಂಕ ಅಂಟಿಸುವ ಹುನ್ನಾರ ನಡೆಸಿರುವುದು ಖಂಡನೀಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಮಣಿಕಂಠ ಅವರ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಅರಿತುಕೊಳ್ಳದೆ ಬಿಜೆಪಿ ಶಾಸಕರು, ಮಾಜಿ ಶಾಸಕರು, ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ನೆಪದಲ್ಲಿ, ಪ್ರಿಯಾಂಕ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಕರಣ ದುರುಪಯೋಗ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸಿz್ದÁರೆ. ಇದಲ್ಲದೆ ಬಿಜೆಪಿ ರಾಜ್ಯಾಧ್ಯP್ಷÀ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಎಂಎಲ್‌ಸಿ ಎನ್.ರವಿಕುಮಾರ್ ಸೇರಿ ಇತರರು ಪ್ರಿಯಾಂಕ್ ರಾಜೀನಾಮೆಗೆ ಒತ್ತಾಯಿಸಿದ್ದರು. ಇದೀಗ ಎಲ್ಲವೂ ಬಯಲಾಗಿದ್ದು, ಸಚಿವರ ವಿರುದ್ಧ ಆಧಾರ ರಹಿತ ಆರೋಪ ಮಾಡಿದ ಬಿಜೆಪಿ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಜಿಪಂ ಮಾಜಿ ಸದಸ್ಯರಾದ ರಮೇಶ ಮರಗೋಳ, ಶಿವರುದ್ರ ಬೀಣಿ, ತಾಪಂ ಮಾಜಿ ಅಧ್ಯP್ಷÀ ಜಗಣ್ಣಗೌಡ ರಾಮತೀರ್ಥ, ಪ್ರಮುಖರಾದ ಚಂದ್ರಶೇಖರ ಕಾಶಿ, ಸಂಜಯ ಬೂಳಕರ, ಬಸವರಾಜ ಚಿನ್ನಮಳ್ಳಿ, ಶಿವಾಜಿ ಕಾಶಿ, ಸಾಬಣ್ಣ ಕಾಶಿ, ರವಿಂದ್ರರಡ್ಡಿ ಭಂಕಲಗಿ, ಸಿದ್ದು ಸಂಗಾವಿ, ಸಂತೋಷ ಪೂಜಾರಿ, ನಾಗರಡ್ಡಿ ಗೋಪಸೇನ, ನಜೀರ್ ಆಡಕಿ, ರವಿ ಸಾಗರ ಹೊಸ್ಮನಿ, ನಿಂಬೆಣ್ಣಪ್ಪ ಪಾಟೀಲï, ಇಕ್ಬಾಲï ಸೇಠ್, ವಿನ್ನುಕುಮಾರ ಜೆಡಿ, ಅಂಬರೇಶ ಮರಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts