More

    ಬೆಂಗಳೂರಿನಲ್ಲಿ 22 ವರ್ಷದ ಯುವತಿ ಮೇಲೆ ಅತ್ಯಾಚಾರ! ಮರ್ಮಾಂಗಕ್ಕೆ ಮದ್ಯದ ಬಾಟಲ್ ಇಟ್ಟು ವಿಡಿಯೋ ಮಾಡಿದ್ದ ಪಾಪಿಗಳನ್ನು ವಶಕ್ಕೆ ಪಡೆದ ಪೊಲೀಸ್​

    ಬೆಂಗಳೂರು: ನಗರದಲ್ಲಿ 22 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ್ದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಾವೆಸಗಿ ಯುವತಿಯ ಮರ್ಮಾಂಗಕ್ಕೆ ಮದ್ಯದ ಬಾಟಲ್​ ಇಟ್ಟು, ಅದನ್ನೆಲ್ಲ ವಿಡಿಯೋ ಮಾಡಿದ್ದ ಯುವಕರ ಗ್ಯಾಂಗ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸುಮಾರು 10 ದಿನಗಳ ಹಿಂದೆ ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ಈ ಅತ್ಯಾಚಾರ ನಡೆದಿದೆ. ಸಂತ್ರಸ್ಥೆ ಮತ್ತು ಆರೋಪಿಗಳು ಬಾಂಗ್ಲಾ ದೇಶದ ಮೂಲದವರು ಎನ್ನಲಾಗಿದೆ. ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ರಾಮಮೂರ್ತಿ ನಗರದ ಎನ್ ಆರ್ ಐ ಕಾಲೋನಿಯಲ್ಲಿ ವಾಸವಾಗಿದ್ದರು. ಅಲ್ಲಿಯೇ ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

    ಸಂತ್ರಸ್ಥೆ ಮೇಲಿನ ದ್ವೇಷದಿಂದ ಓರ್ವ ಯುವತಿ ಜತೆಗೆ ನಾಲ್ವರ ಯುವಕರಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ಎಸಗಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದರು. ಬಾಂಗ್ಲಾ ದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಆ ವಿಡಿಯೋ ವೈರಲ್ ಆಗಿತ್ತು. ಆರೋಪಿಗಳೆಲ್ಲರೂ ಸಂತ್ರಸ್ತೆಗೆ ಪರಿಚಯಸ್ಥರೇ ಎನ್ನಲಾಗಿದೆ.

    ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಂಗ್ಲಾ ಮೂಲದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹೈದರಾಬಾದ್​ ಮೂಲದ ಹಕೀಲ್​ನನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಂತ್ರಸ್ಥೆ ಕೂಡ ನಾಪತ್ತೆಯಾಗಿದ್ದು ಆಕೆಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ.

    ಸಂತ್ರಸ್ಥೆಯ ವಿಡಿಯೋ ವೈರಲ್​ ಆದ ನಂತರ ಅಸ್ಸಾಂ ರಾಜ್ಯದ ಪೊಲೀಸರು ವಿಡಿಯೋ ಬಗ್ಗೆ ತನಿಖೆ ನಡೆಸಿದ್ದರು. ಕೃತ್ಯದಲ್ಲಿ ಬಾಂಗ್ಲಾ ಮೂಲದವರು ಇರುವುದು ತಿಳಿದುಬಂದ ನಂತರ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನ ಪತ್ತೆಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ರೋಗಿಯನ್ನು ನೋಡಲು ಬಂದವರನ್ನು ಥಳಿಸಿದ ಡಾಕ್ಟರ್​! ಬೆಚ್ಚಿ ಬೀಳಿಸುತ್ತೆ ಈ ಆಸ್ಪತ್ರೆಯಲ್ಲಿ ನಡೆದ ಘಟನೆ

    ಅಪ್ರಾಪ್ತೆ ಮೇಲೆ ಅತ್ಯಾಚಾರ, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts