More

    ಕನ್ನಡಿಗರು ಹುಟ್ತಾನೆ ಭಜರಂಗಿಗಳು: ಸಂಸದ ತೇಜಸ್ವಿ ಸೂರ್ಯ

    ತುಮಕೂರು: ಕರ್ನಾಟಕ ಹನುಮ ಹುಟ್ಟಿದ ನಾಡು. ಹಾಗಾಗಿ, ನಾವೆಲ್ಲಾ ಹುಟ್ಟುತ್ತಾನೆ ಭಜರಂಗಿಗಳು. ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯ ಪ್ರಸ್ತಾವನೆಯ ಹಿಂದಿನ ಸಂಚು ಇಂದು ನಿನ್ನೆಯದಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದರು.

    ನಗರದ ಸಿದ್ದಿವಿನಾಯಕ ಸಭಾಂಗಣದಲ್ಲಿ ಜಾಗೃತ ಮತದಾರರ ವೇದಿಕೆ ಏರ್ಪಡಿಸಿದ್ದ ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ ದಿಕ್ಸೂಚಿ ಭಾಷಣದಲ್ಲಿ ಬಜರಂಗದಳ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    2008ರ 26/11 ತಾಜ್ ಹೋಟೆಲ್ ಮೇಲಿನ ಭಯೋತ್ಪಾದಕ ಕೃತ್ಯ ನಡೆದ ಸಂದರ್ಭದಲ್ಲಿ ಅಮೆರಿಕಾ ಧೂತವಾಸ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ರಾಹುಲ್‌ಗಾಂಧಿ ಹಿಂದು ಭಯೋತ್ಪಾದನೆ ದೇಶಕ್ಕೆ ದೊಡ್ಡ ಸವಾಲಾಗಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ಸಾಬೀತು ಪಾಡಿಸಲು ಸಣ್ಣ ಸಾಕ್ಷೃವಿಲ್ಲದ ಕಾಂಗ್ರೆಸ್ 2011ರಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದು ಭಯೋತ್ಪಾದನೆ ಕಪ್ಪು ಕಳಂಕವನ್ನು ಹಚ್ಚಲು ಸಾದ್ವಿ ಪ್ರಜ್ಞಾಸಿಂಗ್‌ರನ್ನು ಉಗ್ರಕೃತ್ಯ ಹೆಸರಲ್ಲಿ ಬಂಧಿಸಲಾಗಿತ್ತು. ಅದರ ಮುಂದುವರೆದ ಭಾಗವೇ ನಿಷೇಧಿತ ಪಿಎಫ್‌ಐ ಸಂಘಟನೆ ಜತೆಗೆ ಸಾಂಸ್ಕೃತಿಕ ಸಂಘಟನೆ ಬಜರಂಗದಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಇದು ಕಾಂಗ್ರೆಸ್ ಅಜೆಂಡಾ ಎಂದರು.

    2024ರಲ್ಲಿ ಮೋದಿ ಮತ್ತೆ ಪ್ರಧಾನಿ: ಕೇಂದ್ರದಲ್ಲಿ 2024ರಲ್ಲಿ ಮೋದಿ ಮತ್ತೆ ಪ್ರಧಾನಿ ಆಗಲಿದ್ದು ರಾಜ್ಯದಲ್ಲಿ ಇನ್ಯಾವುದು ಪಕ್ಷವನ್ನು ಅಧಿಕಾರಕ್ಕೆ ತಂದು ಹಣೆಹಣೆ ಚಚ್ಚಿಕೊಳ್ಳುವ ಕೆಲಸವನ್ನು ಯಾವ ಕನ್ನಡಿಗನು ಮಾಡುವುದಿಲ್ಲ. ಹಾಗಾಗಿ, ಬಿಜೆಪಿ 113 ರಿಂದ 130 ಸ್ಥಾನ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts