More

    VIDEO: ‘ಏ.5ರ ರಾತ್ರಿ 9ಗಂಟೆ…ಕೈಯಲ್ಲಿ ಮೊಂಬತ್ತಿ ಹಿಡಿದು ಮನೆಯ ಬಾಲ್ಕನಿ ಮೇಲೆ 9 ನಿಮಿಷ ಓಡಾಡಿದ ದೆವ್ವ…!’ ನಗು ಕಂಟ್ರೋಲ್​ ಆಗ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿ ನಿನ್ನೆ ರಾತ್ರಿ ದೇಶಾದ್ಯಂತ ಅನೇಕರು ದೀಪ ಬೆಳಗಿದ್ದಾರೆ. ಮೊಬೈಲ್ ಫ್ಲ್ಯಾಶ್​, ಟಾರ್ಚ್​ ಬೆಳಕಿನ ಮೂಲಕ ಕರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಾಗಿದ್ದಾರೆ.  ಆದರೆ ಬೆಂಗಳೂರಿನ ವ್ಯಕ್ತಿಯೋರ್ವ ದೀಪ ಹಚ್ಚಿದ ರೀತಿ ಈಗ ಇಂಟರ್​​ನೆಟ್​ನಲ್ಲಿ ಟ್ರೆಂಡ್​ ಸೃಷ್ಟಿಸಿದೆ.

    ವ್ಯಕ್ತಿಯೋರ್ವ ದೆವ್ವದಂತೆ ವೇಷ ಧರಿಸಿ, ದೀಪ ಹಿಡಿದು ತಮ್ಮ ಮನೆಯ ಬಾಲ್ಕನಿಯ ಮೇಲೆ ಅತ್ತಿಂದಿತ್ತ ಓಡಾಡುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. 15 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಮೊದಲು ನೂಡ್ಲ್​ಹೆಡ್​ ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್ ಆಗಿದೆ.

    ಈ ವ್ಯಕ್ತಿ ತಲೆಯಿಂದ ಕಾಲು ಪಾದದವರೆಗೂ ಬಿಳಿ ಬಣ್ಣದ ಉಡುಗೆಯಿಂದ ಪೂರ್ತಿಯಾಗಿ ಮುಚ್ಚಿಕೊಂಡು, ದೆವ್ವದಂತೆ ವೇಷ ಹಾಕಿಕೊಂಡು ಕೈಯಲ್ಲಿ ಮೊಂಬತ್ತಿ ಹಿಡಿದು, ಬಾಲ್ಕನಿಯಲ್ಲಿ ಓಡಾಡುತ್ತಿರುವುದನ್ನು ನೋಡಬಹುದು. ಇನ್ನೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈತನ ಮನೆಯಿಂದ ಅದೇ ಸಮಯದಲ್ಲಿ 1965ರಲ್ಲಿ ತೆರೆಕಂಡ ಗುಮ್​ ನಾಮ್​ ಸಿನಿಮಾದ ಗುಮ್​ ನಾಮ್​ ಹೈ ಕೋಯಿ ಎಂಬ ಹಾಡೂ ಕೂಡ ಕೇಳಿಬರುತ್ತಿತ್ತು.

    ಈ ವಿಡಿಯೋ 3500ಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದೆ. 900ಕ್ಕೂ ಅಧಿಕ ಲೈಕ್ಸ್​ ಪಡೆದಿದೆ. ನೆಟ್ಟಿಗರಂತೂ ಬಿದ್ದುಬಿದ್ದು ನಗುತ್ತಿದ್ದಾರೆ. ಈತನಿಗೊಂದು ದೊಡ್ಡ ನಮಸ್ಕಾರ ಎನ್ನುತ್ತಿದ್ದಾರೆ. ಹಾಗೇ ಇವನಿಗೊಂದು ಅವಾರ್ಡ್​ ಕೊಡಲೇ ಬೇಕು ಎಂದು ಕೆಲವರು ಕಾಮೆಂಟ್​ ಹಾಕಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts